ತೆಲಂಗಾಣದಲ್ಲಿ ಮಯೋನಿಸ್ ಮಾರಾಟ ನಿಷೇಧ

Prasthutha|

ಹೈದರಾಬಾದ್: ಮೊಟ್ಟೆಯಿಂದ ತಯಾರಿಸುವ ಮಯೋನಿಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ಒಂದು ವರ್ಷದವರೆಗೆ ನಿಷೇಧಿಸಿ ತೆಲಂಗಾಣ ಸರ್ಕಾರ ಆದೇಶಿಸಿದೆ.

- Advertisement -


ಮಯೋನಿಸ್ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


‘ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದ್ದು, ಈ ವೇಳೆ ಮೊಟ್ಟೆಯಿಂದ ಮಾಡುವ ಮಯೋನಿಸ್ನಲ್ಲಿ ವಿಷಾಹಾರಕ್ಕೆ(ಫುಡ್ ಪಾಯಿಸನಿಂಗ್) ಕಾರಣವಾಗುವ ಅಂಶಗಳು ಕಂಡುಬಂದಿದೆ. ಆದ್ದರಿಂದ ತಕ್ಷಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಜ್ಯ ಆಹಾರ ಸುರಕ್ಷತಾ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -


ಮಯೋನಿಸ್ ಅನ್ನು ಸಾಮಾನ್ಯವಾಗಿ ಇದನ್ನು ಸ್ಯಾಂಡ್ ವಿಚ್, ಸಲಾಡ್, ಶವರ್ಮ ಸೇರಿದಂತೆ ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.




Join Whatsapp