ಅಯೋಧ್ಯೆ ಹೆಸರಿನಲ್ಲಿ ನಕಲಿ ಪ್ರಸಾದ ಮಾರಾಟ; ಅಮೆಜಾನ್ ಗೆ ನೋಟಿಸ್

Prasthutha|

ನವದೆಹಲಿ: ‘ಶ್ರೀರಾಮ ಮಂದಿರ ಅಯೋಧ್ಯ ಪ್ರಸಾದ’ ಹೆಸರಿನಲ್ಲಿ ಸಿಹಿತಿಂಡಿಗಳನ್ನು ತನ್ನ ವೇದಿಕೆಯಲ್ಲಿ ಮಾರಾಟ ಮಾಡಿದ ಸಂಬಂಧ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ.

- Advertisement -


ರಾಮಪ್ರಸಾದ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅಮೆಜಾನ್ ಆನ್ ಲೈನ್ ಗ್ರಾಹಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದೆ.

ದೂರಿಗೆ ಪ್ರತಿಕ್ರಿಯಿಸಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅಮೆಜಾನ್ಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ವಾರದೊಳಗೆ ವಿವರಣೆ ನೀಡುವಂತೆ ಗಡುವು ನೀಡಲಾಗಿದೆ. ಇಲ್ಲವಾದಲ್ಲಿ ಕಂಪನಿ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.



Join Whatsapp