ಗಾಂಜಾ ಮಾರಾಟ; ಮಾಲು ಸಮೇತ ಆರೋಪಿಗಳು ಪೊಲೀಸ್ ವಶಕ್ಕೆ

Prasthutha|

ಶಿವಮೊಗ್ಗ : ಗಾಂಜಾ ಮಾರಾಟ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಶಿವಮೊಗ್ಗದ ಹಳೆನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಹೊಳೆಹೊನ್ನೂರು ರಸ್ತೆಯಿಂದ ಹೊಸಸೀಗೇಬಾಗಿ ಕಡೆಗೆ ಹೋಗುವ ರಸ್ತೆಯ ಸಮೀಪದ ಅಂಗಡಿಯ ಮುಂಭಾಗದ ಕಚ್ಚಾರಸ್ತೆಯಲ್ಲಿ ನಾಲ್ವರು ವ್ಯಕ್ತಿಗಳು ಗಾಂಜಾ ಮಾರಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳಿದ್ದ ಸ್ಥಳಕ್ಕೆ ಧಾವಿಸಿ ಬಂಧಿಸಿದ್ದಾರೆ.


ಮೊಹಮ್ಮದ್‌ ಖಾಲಿದ್‌, ಮೊಹಮ್ಮದ್‌ ಸಾಹಿಲ್‌, ಮೊಹಮ್ಮದ್‌ ಅರ್ಶನ್‌, ಸಯ್ಯದ್ ಅರ್ಬಾಝ್ ಎಂಬ ನಾಲ್ವರು ಬಂಧಿತ ಆರೋಪಿಗಳು.

- Advertisement -


ಆರೋಪಿಗಳಿಂದ ಅಂದಾಜು 69,000 ರೂಪಾಯಿ ಮೌಲ್ಯದ 2.150 ಗ್ರಾಂ ತೂಕದ ಒಣ ಗಾಂಜಾ, 800 ರೂ ನಗದು ಹಣ, 03 ಮೊಬೈಲ್‌ ಫೋನ್‌ ಗಳು ಹಾಗೂ ಕೃತ್ಯಕ್ಕೆ ಬಳಸಿದ 02 ದ್ವಿ ಚಕ್ರ ವಾಹನ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕಾರ್ಯಾಚರಣೆಯಲ್ಲಿ ಎ.ಎಸ್‌.ಪಿ ಭದ್ರಾವತಿ ಉಪ ವಿಭಾಗ, ಸಿಪಿಐ ಭದ್ರಾವತಿ ನಗರ ವೃತ್ತ ಹಾಗೂ ಹಳೆನಗರ ಪೊಲೀಸ್‌ ಠಾಣೆಯ ಅಧಿಕಾರಿವರ್ಗ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.



Join Whatsapp