ಸಲಾಮ್ ಮಂಗಳಾರತಿ ಹೆಸರು ಬದಲಾಯಿಸಿದ ಸರ್ಕಾರ

Prasthutha|

ಕೊಲ್ಲೂರು: ಸಂಘಪರಿವಾರದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಐತಿಹಾಸಿಕ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಸಾಂಪ್ರದಾಯಿಕ ಸಲಾಮ್ ಮಂಗಳಾರತಿ ಪೂಜೆಯ ಹೆಸರು ಬದಲಾಯಿಸಲು ಸರ್ಕಾರ ಮುಂದಾಗಿದ್ದು, ಈ ಪೂಜೆಯನ್ನು ದೇವಿತಿಕೆ ಮಂಗಳಾರತಿ ಪೂಜೆ ಎಂದು ಮರು ನಾಮಕರಣ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಮೈಸೂರು ಸಂಸ್ಥಾನದ ರಾಜನಾದ ಟಿಪ್ಪುಸುಲ್ತಾನ್ ಅವರು 1763ರಲ್ಲಿ ಐತಿಹಾಸಿಕ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಭೇಟಿಕೊಟ್ಟು ಸಂರಕ್ಷಣೆ ಒದಗಿಸಿದ ನೆನಪಿಗಾಗಿ ಈ ದೇವಸ್ಥಾನದಲ್ಲಿ ಪ್ರತಿ ದಿನ ಸಂಜೆ ಸಲಾಮ್ ಮಂಗಳಾರತಿ ನಡೆಸಿ ಟಿಪ್ಪುಗೆ ಗೌರವ ಸಲ್ಲಿಸಲಾಗುತ್ತಿತ್ತು. ಸದ್ಯ ಸಂಘಪರಿವಾರದ ಒತ್ತಡಕ್ಕೆ ಮಣಿದು ಈ ಸಾಂಪ್ರದಾಯಿಕ ಪದ್ದತಿಗೆ ಕತ್ತರಿ ಪ್ರಯೋಗಿಸಲು ಮುಂದಾಗಿದ್ದು, ಸಾರ್ವಜಕನಿಕರ ವ್ಯಾಪಕ ಟೀಕೆಗೆ ಗುರಿಯಾಗಿದೆ.



Join Whatsapp