ಸಕಲೇಶಪುರ: ಗೋಮಾಂಸ ಖಾದ್ಯ ತಯಾರಿಕೆಯ ನೆಪದಲ್ಲಿ ಪುಂಡಾಟಿಕೆ ಮೆರೆದ ಬಜರಂಗದಳ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಎಸ್.ಡಿ.ಪಿ.ಐ ಆಗ್ರಹ

Prasthutha|

ಹಾಸನ: ಸಕಲೇಶಪುರದ ಮಾರನಹಳ್ಳಿಯಲ್ಲಿ ಗೋಮಾಂಸ ಖಾದ್ಯ ತಯಾರಿಕೆಯ ನೆಪದಲ್ಲಿ ಹೋಟೆಲೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ ಬಜರಂಗದಳದ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಸ್.ಡಿ.ಪಿ.ಐ ಹಾಸನ ಜಿಲ್ಲಾ ಸಮಿತಿ ವತಿಯಿಂದ ಉಪ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

- Advertisement -

ಹೋಟೆಲೊಂದರಲ್ಲಿ ಗೋಮಾಂಸ ಆಹಾರ ಪದಾರ್ಥವನ್ನು ತಯಾರಿಸಲಾಗುತ್ತಿದೆ ಎಂಬ ನೆಪವೊಡ್ಡಿ ಅಲ್ಲಿದ ನೌಕರರಿಗೆ ಕಬ್ಬಿಣದ ರಾಡ್ ಮತ್ತು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು. ಆ ಬಳಿಕ ಬಜರಂಗದಳದ ಕಾರ್ಯಕರ್ತರು ಆಹಾರ ಪದಾರ್ಥ, ಪೀಠೋಪಕರಣ ಸಹಿತ ಹಲವಾರು ಸೊತ್ತುಗಳನ್ನು ನಾಶಪಡಿಸಿ ದಾಂಧಲೆ ನಡೆಸಿದ್ದರು. ಈ ನಿಟ್ಟಿನಲ್ಲಿ ದುಷ್ಕೃತ್ಯದಲ್ಲಿ ಪಾಲ್ಗೊಂಡ ಬಜರಂಗದಳದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಆಗ್ರಹಿಸಿದೆ.

ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಲವ್ ಜಿಹಾದ್ ಎಂಬ ಕಪೋಲಕಲ್ಪಿತ ವಿಚಾರ, ಮಂಜ್ರಾಬಾದ್ ಕೋಟೆ, ಕಬರ್ ಸ್ಥಾನಗಳನ್ನು ಅತಿಕ್ರಮಿಸಿ ಅನೈತಿಕ ಪೊಲೀಸ್ ಗಿರಿ ನಡೆಸುತ್ತಿರುವ ಬಜರಂಗದಳದ ಪುಂಡಾಟಿಕೆ, ಶಾಂತಿ ಸೌಹಾರ್ದತೆ ಧಕ್ಕೆ ತರುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಎಸ್.ಡಿ.ಪಿ.ಐ ತನ್ನ ಮನವಿಯಲ್ಲಿ ಆಗ್ರಹಿಸಿದೆ.

- Advertisement -

ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಮುಖಂಡರುಗಳಾದ ಸಲೀಂ ಹೆಚ್, ಸಿದ್ದೀಕ್ ಆನೆಮಹಲ್, ಮನ್ಸೂರ್, ಸಾದಿಕ್, ಜಮೀಲ್ ಮತ್ತು ಇರ್ಫಾನ್ ಉಪಸ್ಥಿತರಿದ್ದರು.



Join Whatsapp