ಸಕಲೇಶಪುರ: ಪೊಲೀಸ್​ ಕಾನ್ಸ್​ಟೇಬಲ್​ ಆತ್ಮಹತ್ಯೆ

Prasthutha|

ಹಾಸನ: ಸಕಲೇಶಪುರದ ಪೊಲೀಸ್​ ಕ್ವಾರ್ಟರ್ಸ್​ ನಲ್ಲಿ ಕಾನ್ಸ್​ ಟೇಬಲ್​ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಸೋಮಶೇಖರ್ (39) ಮೃತರು ಎಂದು ತಿಳಿದು ಬಂದಿದೆ.

ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಸೋಮಶೇಖರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿ ಸೋಮಶೇಖರ್ ವಿರುದ್ಧ ಕಿರುಕುಳ ಆರೋಪ ಮಾಡಿ ಪತ್ನಿ DySPಗೆ ದೂರು ನೀಡಿದ್ದರು. ಇದರಿಂದ ಮನನೊಂದು ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp