“ಸಾಕಪ್ಪ ಸಾಕು ಕಿವಿ ಮೇಲೆ ಹೂವಿಟ್ಟಿದ್ದು”: ಬೊಮ್ಮಾಯಿ ವಿರುದ್ಧ ಮತ್ತೆ ಪೋಸ್ಟರ್ ಅಭಿಯಾನ

Prasthutha|

ಬೆಂಗಳೂರು: ‘ಪೇ ಸಿಎಂ’ ಅಭಿಯಾನದ ಬಳಿಕ ಕಾಂಗ್ರೆಸ್ ನಾಯಕರು ಮತ್ತೆ “ಸಾಕಪ್ಪ ಸಾಕು ಕಿವಿ ಮೇಲೆ ಹೂವಿಟ್ಟಿದ್ದು” ಎನ್ನುವ ಪೋಸ್ಟರ್ ಅಭಿಯಾನ ಪ್ರಾರಂಭಿಸಿದ್ದಾರೆ.

- Advertisement -


ಬೆಂಗಳೂರಿನ ಸುಮಾರು 24 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೂರು ಮಾದರಿಯ ಪೋಸ್ಟರ್ ಗಳನ್ನು ನಿನ್ನೆ ತಡರಾತ್ರಿ ಕಾಂಗ್ರೆಸ್ನ ಮುಖಂಡರು ಅಂಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೋಸ್ಟರ್ ಅಭಿಯಾನದಲ್ಲಿ ಪ್ರಧಾನಿ ಮೋದಿ ಪೋಟೋ ಹಾಕಿ ಕಿವಿ ಮೇಲೆ ಹೂವಿನ ಚಿತ್ರ ಅಂಟಿಸಲಾಗಿದೆ.


ಭರವಸೆ, ಭರವಸೆ ಬುರುಡೆ ಭರವಸೆ ಎಂಬ ವಾಕ್ಯವನ್ನು ಬರೆಯಲಾಗಿದೆ.

Join Whatsapp