ಸಜೀಪನಡು: ಮಸ್ಜಿದ್ ಬಿಲಾಲ್ ಸಲಫಿ ಮಸೀದಿ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಅಯ್ಕೆ

Prasthutha|

ಉಳ್ಳಾಲ: ಮಸ್ಜಿದ್ ಬಿಲಾಲ್ ಸಲಫಿ ಮಸೀದಿಯ ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಆಯ್ಕೆಯಾಗಿದ್ದಾರೆ.ಮಸೀದಿ ಮಾಜಿ ಅಧ್ಯಕ್ಷ ಅಲ್ತಾಫ್ ಅಧ್ಯಕ್ಷತೆಯಲ್ಲಿ ಮಸೀದಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

- Advertisement -

ಬಿಲಾಲ್ ಮಸೀದಿ ಆಡಳಿತ ಕಮಿಟಿಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯ ಸದಸ್ಯರಾಗಿ, ಮತ್ತು ಮಸೀದಿಯ ಎಲ್ಲ ಕಾರ್ಯದಲ್ಲಿ ವಿಶೇಷ ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿರುವ ಅಬೂಬಕ್ಕರ್ ಸಿದ್ದೀಕ್
ಅವರನ್ನು ಮಸೀದಿಯ ನೂತನ ಅದ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ನವಾಝ್ , ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್
ಕಾರ್ಯದರ್ಶಿಯಾಗಿ ಶಫೀಕ್, ಕೋಶಾಧಿಕಾರಿಯಾಗಿ ಜಾಬಿರ್ ಆಯ್ಕೆಯಾದರು.

- Advertisement -

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಲ್ತಾಫ್ , ರಶೀದ್, ಇಲ್ಯಾಸ್, ನೌಶಾದ್, ನಿಯಾಝ್, ಫಯಾಝ್, ಅವರನ್ನು ಆರಿಸಲಾಯಿತು. ಮಸೀದಿಯ ಆಡಳಿತ ಮತ್ತು ಆಡಳಿತ ಸಮಿತಿಯ ಸದಸ್ಯರ ಕಾರ್ಯವೈಖರಿ ಮತ್ತು ಕಳೆದ ವರ್ಷದ ಮಸೀದಿಯ ಖರ್ಚು ವೆಚ್ಚಗಳ ಬಗ್ಗೆ ಮಾಜಿ ಕಾರ್ಯದರ್ಶಿ ಇಲ್ಯಾಸ್ ಮಾಹಿತಿ ನೀಡಿದರು.



Join Whatsapp