ಸಿಎಎ ಪ್ರತಿಭಟನೆಯ ನೆಪದಲ್ಲಿ ಉ.ಪ್ರ ಪೊಲೀಸರಿಂದ ಚಿತ್ರಹಿಂಸೆಗೊಳಗಾದ ಸದಾಫ್ ಜಾಫರ್’ಗೆ ಕಾಂಗ್ರೆಸ್ ಟಿಕೆಟ್

Prasthutha|

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ನೆಪದಲ್ಲಿ ಪೊಲೀಸರಿಂದ ಚಿತ್ರ ಹಿಂಸೆಗೊಳಗಾದ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ನ ರಾಷ್ಟ್ರೀಯ ಸಂಯೋಜಕಿ ಸದಾಫ್ ಜಾಫರ್ ಅವರಿಗೆ ಟಿಕೆಟ್ ನೀಡಿದೆ.

- Advertisement -

ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಲಕ್ನೋ ಸೆಂಟ್ರಲ್ ನಿಂದ ಜಾಫರ್ ಸ್ಪರ್ಧಿಸಲಿದ್ದಾರೆ. 2019 ರ ಡಿಸೆಂಬರ್ 19 ರಂದು ಬಂಧನದಲ್ಲಿದ್ದಾಗ ಲಕ್ನೋ ಪೊಲೀಸರು ಆಕೆಗೆ ತೀವ್ರ ರೀತಿಯ ಚಿತ್ರಹಿಂಸೆ ನೀಡಿದ್ದರು ಮತ್ತು 19 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಮಾತ್ರವಲ್ಲ ಬಂಧನಕ್ಕೊಳಗಾದ ಆಕೆಯನ್ನು ಪುರುಷರ ಪೊಲೀಸರು ಹೊಟ್ಟೆಗೆ ಒದ್ದು ಕ್ರೂರತೆ ಮೆರೆದಿದ್ದರು.

ಒಟ್ಟು 125 ಅಭ್ಯರ್ಥಿಗಳಲ್ಲಿ 40 ಶೇಕಡಾ ಮಹಿಳೆಯರು ಮತ್ತು 40 ಶೇಕಡಾ ಯುವಕರು ಒಳಗೊಂಡಿರುವುದು ವಿಶೇಷ. ಈ ಐತಿಹಾಸಿಕ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಹೊಸ ಹುಮ್ಮಸ್ಸು ತರುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -



Join Whatsapp