ಸಚಿನ್ ಪೈಲಟ್ ರಾಜಸ್ಥಾನ ಸಿಎಂ ಆಗಲಿ: ಭಾರತ್ ಜೋಡೋ ಯಾತ್ರೆಯಲ್ಲಿ ಕೇಳಿಬಂದ ಘೋಷಣೆ

Prasthutha|

- Advertisement -

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ 100 ದಿನಗಳನ್ನು ಪೂರೈಸಿದೆ.

ಭಾನುವಾರ, ರಾಹುಲ್ ಗಾಂಧಿ ರಾಜಸ್ಥಾನದ ದೌಸಾದಿಂದ ದಿನದ ಪಾದಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ, ಸಚಿನ್ ಪೈಲಟ್ ರಾಜಸ್ಥಾನ ಸಿಎಂ ಆಗಲಿ ಎಂದು ಘೋಷಣೆಗಳು ಕೇಳಿಬಂದವು ಎಂದು ವರದಿಯಾಗಿದೆ.

- Advertisement -

ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಕೆಲವರು “ಸಚಿನ್ ಪೈಲಟ್ ಜಿಂದಾಬಾದ್. (ಸಚಿನ್ ಪೈಲಟ್ ಜಯವಾಗಲಿ). ಹಮಾರಾ ಸಿಎಂ ಕೈಸಾ ಹೋ? ಸಚಿನ್ ಪೈಲಟ್ ಜೈಸಾ ಹೋ. (ನಮ್ಮ ಮುಖ್ಯಮಂತ್ರಿ ಹೇಗಿರಬೇಕು? ಸಚಿನ್ ಪೈಲಟ್​​ನಂತಿರಬೇಕು ) ಎಂದು ಕೂಗಿದ್ದಾರೆ.

Join Whatsapp