ಶಬರಿಮಲೆ ಯಾತ್ರಾರ್ಥಿಗಳ ಬಸ್-ಆಟೋ ಮಧ್ಯೆ ಅಪಘಾತ: ಐವರು ಮೃತ್ಯು

Prasthutha|

ಮಲಪ್ಪುರಂ: ಶಬರಿಮಲೆ ಯಾತ್ರಾರ್ಥಿಗಳ ಬಸ್ ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ನಾಲ್ವರು ಪ್ರಯಾಣಿಕರು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಂಚೇರಿಯಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಸಂಭವಿಸಿದೆ.

- Advertisement -

ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಕರ್ನಾಟಕ ಬಸ್ ಮತ್ತು ಆಟೋ ಮಧ್ಯೆ ಅಪಘಾತವಾಗಿದೆ. ಆಟೋ ಚಾಲಕ ಮಜೀದ್, ವಾಹನದಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ.



Join Whatsapp