ಬೆಂಗಳೂರು: ಜೈಲಿನ ಶೌಚಾಲಯದಲ್ಲಿ ಶೂ ಲೇಸ್ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ರೌಡಿ ಶೀಟರ್ ಮೃತದೇಹ ಪತ್ತೆಯಾಗಿದೆ.
ಸುನೀಲ್ ಮೃತ ರೌಡಿ ಶೀಟರ್. ಈತನ ಸಾವು ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದ ಸುನಿಲ್ ಇನ್ನು ಹತ್ತು ದಿನಗಳಲ್ಲಿ ಅಂದರೆ ಜೂನ್2 ಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಆಗಬೇಕಿದ್ದ. ಸುನೀಲ್ ಕಗ್ಗಲಿಪುರದಲ್ಲಿ ವಿನೋದ್ ಎಂಬಾತನನ್ನ ಕೊಲೆ ಮಾಡಿ ಜೈಲು ಸೇರಿದ್ದ.
ಕೆಲ ದಿನಗಳ ಹಿಂದೆ ತನ್ನನ್ನು ಕೊಲೆ ಮಾಡಲು ಸ್ಕೆಚ್ ಹಾಕಲಾಗಿದೆ ಎಂದು ಹೆಳಿಕೊಂಡಿದ್ದ ಸುನಿಲ್ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದೆ. ಸುನಿಲ್’ನಿಂದ ಕೊಲೆಯಾಗಿದ್ದ ವಿನೋದ್ ಮಾಜಿ ಕಾರ್ಪೊರೇಟರ್ ಓರ್ವರ ಅಣ್ಣನ ಮಗನಾಗಿದ್ದ. ಇವೆಲ್ಲವನ್ನೂ ನೋಡುತ್ತಿದ್ದರೆ ರೌಡಿಶೀಟರ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸುನಿಲ್ ಸಾವಿಗೆ ನಿಜವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.