ರಷ್ಯಾ- ಉಕ್ರೇನ್ ಕದನ; 1.4 ಲಕ್ಷ ಉಕ್ರೇನ್ ಜನತೆ ರಷ್ಯಾಕ್ಕೆ ಪಲಾಯನ: ವಿದೇಶಾಂಗ ಸಚಿವಾಲಯ ಘೋಷಣೆ

Prasthutha|

ಮಾಸ್ಕೋ: ಯುದ್ಧಪೀಡಿತ ಉಕ್ರೇನ್ ನಿಂದ ಸುಮಾರು 1.4 ಲಕ್ಷ ನಾಗರಿಕರು ರಷ್ಯಾಕ್ಕೆ ಪಲಾಯನ ನಡೆಸಿದ್ದಾರೆಂದು ವಿದೇಶಾಂಗ ಸಚಿವಾಲಯ ಹೇಳಿಕೆಯ ಕುರಿತು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ರಷ್ಯಾ ವಿದೇಶಾಂಗ ಸಚಿವಾಲಯವು, ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಪ್ರಾರಂಭವಾದ ದಿನದಿಂದ ಸುಮಾರು 1.4 ಲಕ್ಷ ಉಕ್ರೇನ್ ನಾಗರಿಕರು ರಷ್ಯಾಕ್ಕೆ ಪಲಾಯನ ಮಾಡಿದ್ದಾರೆ ಎಂದು ತಿಳಿಸಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಫೆಬ್ರವರಿ 24 ರಂದು ಉಕ್ರೇನ್ ನಲ್ಲಿ ಸೇನಾ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ ರಷ್ಯಾ ಸೇನೆಯು, ಉಕ್ರೇನ್’ನ ಪ್ರಮುಖ ಸೇನೆನೆಲೆ, ನಗರಗಳ ಮೇಲೆ ನಿರಂತರ ಕ್ಷಿಮಣಿ ಮತ್ತು ಶೆಲ್ ದಾಳಿ ನಡೆಸುತ್ತಿದೆ.

- Advertisement -

ಈ ಮಧ್ಯೆ ರಷ್ಯಾದ ನಡೆಯನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ವಿರೋಧಿಸಿದೆ.



Join Whatsapp