ರಷ್ಯಾದ ಅಪ್ರಾಪ್ತೆ ಮೇಲೆ ಗೋವಾದಲ್ಲಿ ಅತ್ಯಾಚಾರ: ಗದಗದಲ್ಲಿ ಆರೋಪಿ ಬಂಧನ

Prasthutha|

ಪಣಜಿ: ರಷ್ಯಾದಿಂದ ಪ್ರವಾಸಕ್ಕೆ ಬಂದಿದ್ದ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರವೆಸಗಿದ ಆರೋಪಿಯನ್ನು ಗದಗದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ. ಉತ್ತರ ಗೋವಾದ ಅರಂಬೊಲ್ ರೆಸಾರ್ಟ್ನಲ್ಲಿ ಆರೋಪಿಯು ಕೊಠಡಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರವಿ ಲಮಾಣಿ ಬಂಧಿತ ಆರೋಪಿಯಾಗಿದ್ದಾನೆ.

- Advertisement -


ಕಳೆದ ಮೇ 6ರಂದು ಅತ್ಯಾಚಾರ, ‘ರೆಸಾರ್ಟ್ನ ಈಜುಕೊಳದಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ನಂತರ ಹೋಟೆಲ್ ರೂಮ್ ನಲ್ಲಿಯೂ ಕೊಠಡಿ ಸಹಾಯಕನಿಂದ ಅತ್ಯಾಚಾರ ನಡೆದಿದೆ ಎಂದು ಬಾಲಕಿಯ ತಾಯಿ ಮೇ 9ರಂದು ಪೆರ್ನೆಮ್ ಪೊಲೀಸರಿಗೆ ದೂರು ನೀಡಿದ್ದರು.


ಘಟನೆ ನಡೆದಾಗ ಮಗಳನ್ನು ಈಜುಕೊಳದ ಬಳಿ ಬಿಟ್ಟು ತಾಯಿ ಕೆಲ ಅತ್ಯಗತ್ಯ ವಸ್ತುಗಳನ್ನು ಖರೀದಿಸಲು ಸಮೀಪದ ಅರಂಬೊಲ್ ಪೇಟೆಗೆ ಹೋಗಿದ್ದಾಗ ಕೃತ್ಯ ನಡೆದಿತ್ತು. ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದ. ಆದರೆ ದೂರು ಸ್ವೀಕರಿಸಿದ 24 ಗಂಟೆಗಳ ಒಳಗೆ ನಾವು ಆರೋಪಿಯನ್ನು ಗದಗದಲ್ಲಿ ಪತ್ತೆ ಮಾಡಿ ಬಂಧಿಸಿದ್ದೇವೆ ಎಂದು ಪೆರ್ ನೆಮ್ ಠಾಣೆಯ ಇನ್ ಸ್ಪೆಕ್ಟರ್ ವಿಕ್ರಮ್ ನಾಯಕ್ ತಿಳಿಸಿದ್ದಾರೆ.

- Advertisement -


ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ 376ನೇ ವಿಧಿ (ಅತ್ಯಾಚಾರ), ಗೋವಾ ಮಕ್ಕಳ ಕಾಯ್ದೆಯ 8ನೇ ವಿಧಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.



Join Whatsapp