ರಷ್ಯಾ–ಉಕ್ರೇನ್ ಕದನ; ಯುರೋಪ್‌ ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ

Prasthutha|

ಕೀವ್: ಉಕ್ರೇನ್ ಮೇಲೆ  ಮುಂದುವರಿದ ರಷ್ಯಾದ  ದಾಳಿಯಿಂದಾಗಿ ಉಕ್ರೇನ್ ನಲ್ಲಿರುವ ಯುರೋಪ್‌ ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರಕ್ಕೆ ಹಾನಿಯುಂಟಾಗಿದ್ದು, ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಉಕ್ರೇನ್ ವಿದೇಶಾಂಗ ಸಚಿವರು ದುರಂತವನ್ನು ತಪ್ಪಿಸಲು ಸ್ಥಳದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿದ್ದಾರೆ.

- Advertisement -

ಭಯಭೀತರಾದ ನಿವಾಸಿಗಳು ಪಲಾಯನ ಮಾಡಲು ಮಾನವ ಕಾರಿಡಾರ್‌ ಗಳ ಅನುಕೂಲಕ್ಕೆ ಉಕ್ರೇನಿಯನ್ ವಿನಂತಿಯನ್ನು ಮಾಸ್ಕೋ ಒಪ್ಪಿಕೊಂಡಿದ್ದು, ಕದನ ವಿರಾಮದ ಬಗ್ಗೆ ಯಾವುದೇ ಸೂಚನೆ ಈವರೆಗೆ ಲಭ್ಯವಾಗಿಲ್ಲ. ಈ ಮಧ್ಯೆ ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಪಶ್ಚಿಮ ದೇಶಗಳೊಂದಿಗೆ ಮಿಲಿಟರಿ ಸಹಾಯಕ್ಕೆ ಬೇಡಿಕೆಯಿಟ್ಟಿದ್ದಾರೆ.

“ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೋರಿಝಿಯಾ ಎನ್‌ಪಿಪಿ ಮೇಲೆ ರಷ್ಯಾದ ಸೇನೆಯು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದ್ದು ಸ್ಥಾವರ ಈಗಾಗಲೇ ಬೆಂಕಿಗಾಹುತಿಯಾಗಿದೆ” ಎಂದು ವಿದೇಶಾಂಗ ಸಚಿವ ಟ್ವೀಟ್ ಮಾಡಿದ್ದಾರೆ.

- Advertisement -

“ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾದ ಪಡೆಗಳು ಶೆಲ್ ದಾಳಿ ನಡೆಸಿದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡಿತು” ಎಂದು ವಕ್ತಾರ ಆಂಡ್ರೇ ತುಜ್ ತಿಳಿಸಿದ್ದಾರೆ. ಒಂದು ವೇಳೆ ಸ್ಥಾವರ ಸ್ಫೋಟಗೊಂಡರೆ ಪರಮಾಣು ದುರಂತ ಸಂಭವಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.



Join Whatsapp