ಮಾನವ ಹಕ್ಕು ಮಂಡಳಿಯಿಂದ ರಷ್ಯಾ ಔಟ್; ಜಾಗತಿಕವಾಗಿ ರಷ್ಯಾಕ್ಕೆ ಭಾರೀ ಮುಖಭಂಗ

Prasthutha|

ಹೊಸದಿಲ್ಲಿ:  ವಿಶ್ವಸಂಸ್ಥೆಯ ಟಾಪ್‌-5 ಸ್ಥಾನದಲ್ಲಿದ್ದ ಬಲಿಷ್ಠ ರಾಷ್ಟ್ರ ರಷ್ಯಾವನ್ನು “ಮಾನವ ಹಕ್ಕು ಮಂಡಳಿ’ಯಿಂದ ಅಮಾನತುಗೊಳಿಸಲಾಗಿದ್ದು, ಜಾಗತಿಕವಾಗಿ ರಷ್ಯಾಕ್ಕೆ ಭಾರೀ ಮುಖಭಂಗವಾಗಿದೆ.

- Advertisement -

ಉಕ್ರೇನ್ ವಿರುದ್ಧ ಯುದ್ಧ ಕೈಗೊಂಡ ವಿಚಾರವೇ ವಿಶ್ವಸಂಸ್ಥೆಯ ಕಣ್ಣು ಕೆಂಪಾಗಿಸಿತ್ತು. ವಿಶ್ವಸಂಸ್ಥೆಯ ಘಟಕವಾದ “ಮಾನವ ಹಕ್ಕು ಮಂಡಳಿ’ಯಲ್ಲಿದ್ದೂ ರಷ್ಯಾ ತನ್ನ ಹೊಣೆ ಮರೆತ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದೆ. 

ಮಾನವ ಹಕ್ಕು ಮಂಡಳಿಯಿಂದ ರಷ್ಯಾವನ್ನು ಕೈಬಿಡುವ ವಿಚಾರದಲ್ಲಿ ವಿಶ್ವಸಂಸ್ಥೆ ವೋಟ್ ನಡೆಸಿತ್ತು. 197 ಸದಸ್ಯ ರಾಷ್ಟ್ರಗಳ ಪೈಕಿ, 93 ರಾಷ್ಟ್ರಗಳು ಮಂಡಳಿಯ ನಿಲುವನ್ನು ಬೆಂಬಲಿಸಿ, ಮತ ಚಲಾಯಿಸಿದವು. ಮಾನವ ಹಕ್ಕು ಮಂಡಳಿಯಲ್ಲಿ ಉಳಿದುಕೊಳ್ಳಲು ರಷ್ಯಾಕ್ಕೆ 47 ಮತಗಳ ಆವಶ್ಯಕತೆ ಇತ್ತು. ಆದರೆ ರಷ್ಯಾದ ಪರವಾಗಿ ಕೇವಲ 24 ಮತಗಳಷ್ಟೇ ಬಿದ್ದಿವೆ. ಭಾರತ ಸೇರಿದಂತೆ ಒಟ್ಟು 58 ರಾಷ್ಟ್ರ ಗಳು ಮತದಾನ ಪ್ರಕ್ರಿಯೆಯಿಂದಲೇ ದೂರವುಳಿದು, ತಟಸ್ಥ ಧೋರಣೆ ಅನುಸರಿಸಿದವು.

- Advertisement -

ರಷ್ಯಾ- ಉಕ್ರೇನ್‌ ಯುದ್ಧದ ವಿಚಾರದಲ್ಲಿ ತಾನು ಶಾಂತಿ ಪರ ಎಂಬುದನ್ನು ಭಾರತ ಈಗಾಗಲೇ ಘೋಷಿಸಿದ್ದು, ಮತಪ್ರಕ್ರಿಯೆಯಲ್ಲೂ ಇದೇ ನಿಲುವನ್ನೇ ಎತ್ತಿಹಿಡಿದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿ.ಎಸ್‌. ತಿರುಮೂರ್ತಿ, “ಈ ಯುದ್ಧದ ಆರಂಭದಿಂದಲೂ ಭಾರತ ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ನಿಂತಿದೆ. ರಕ್ತದ ಪ್ರವಾಹದಿಂದ, ಮುಗ್ಧ ನಾಗರಿಕರ ಸಾವಿನಿಂದ ಯಾವುದೇ ಪರಿಹಾರವಿಲ್ಲ ಎಂಬುದನ್ನು ನಂಬಿದವರು ನಾವು. ಭಾರತ ನಿಲ್ಲುವುದಾದರೆ, ಅದು ಶಾಂತಿಯ ಪರ ಮಾತ್ರ  ಎಂದು ಹೇಳಿದ್ದಾರೆ.

Join Whatsapp