ಉಕ್ರೇನ್ ನ ವಸತಿ ಸಮುಚ್ಚಯದ ಮೇಲೆ ರಷ್ಯಾ ಕ್ಷಿಪಣಿ ದಾಳಿ !

Prasthutha|

ಕೀವ್: ರಷ್ಯಾವು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದೆ. ರಷ್ಯಾದ ಎರಡು ಕ್ಷಿಪಣಿಗಳು ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿನ ವಸತಿ ಸಮುಚ್ಚಯಗಳ ಮೇಲೆ ರಾಕೆಟ್ ದಾಳಿ ನಡೆಸಿವೆ.

- Advertisement -

ಒಂದು ಕ್ಷಿಪಣಿಯು ಜುಲ್ಯಾನಿ ವಿಮಾನ ನಿಲ್ದಾಣದ ಸಮೀಪವಿರುವ ಪ್ರದೇಶದಲ್ಲಿ ಸ್ಫೋಟಗೊಂಡರೆ, ಇನ್ನೊಂದು ಕ್ಷಿಪಣಿ ಸೆವಾಸ್ಟೊಪೋಲ್ ಚೌಕದ ಸಮೀಪವಿರುವ ಪ್ರದೇಶವನ್ನು ಧ್ವಂಸ ಮಾಡಿದೆ.

ರಷ್ಯಾವನ್ನು ಜಗತ್ತಿನ ಪ್ರಬಲ ರಾಷ್ಟ್ರಗಳು ಒತ್ತಡ ಹೇರಬೇಕು. ರಷ್ಯಾದ ರಾಯಭಾರಿಗಳನ್ನು ನಿಮ್ಮ ದೇಶದಿಂದ ಹೊರಹಾಕಿ ಎಂದು ಉಕ್ರೇನ್ ವಿದೇಶಾಂಗ ಸಚಿವ ಡೆಮೈಟ್ರೋ ಕುಲೇಬಾ ಒತ್ತಾಯಿಸಿದ್ದಾರೆ.



Join Whatsapp