ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ; 11 ಮಂದಿ ಸಾವು

Prasthutha|

ಕೀವ್: ರಷ್ಯಾ ಪಡೆಗಳು ಉಕ್ರೇನ್ ಮೇಲೆ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಕನಿಷ್ಠ 11 ಮಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ಕೀವ್ ನಗರವನ್ನು ಗುರಿಯಾಗಿಸಿ ರಷ್ಯಾ ಆಕ್ರಮಣವನ್ನುನಡೆಸಿದ್ದು, ಅಮೆರಿಕ, ಜರ್ಮನಿ ಅತ್ಯಾಧುನಿಕ ಯುದ್ಧ ಟ್ಯಾಂಕ್ಗಳನ್ನು ಉಕ್ರೇನ್ಗೆ ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ ರಷ್ಯಾ ದಾಳಿ ತೀವ್ರಗೊಳಿಸಿದೆ.
ಉಕ್ರೇನ್ ವಾಯು ರಕ್ಷಣೆ ವ್ಯವಸ್ಥೆಯು, ರಷ್ಯಾ ನಡೆಸಿದ 55 ಕ್ಷಿಪಣಿ ದಾಳಿಗಳ ಪೈಕಿ 47 ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸಶಸ್ತ್ರ ಪಡೆಯ ಕಮಾಂಡರ್ ಮಾಹಿತಿ ನೀಡಿದ್ದಾರೆ.



Join Whatsapp