ರಷ್ಯಾ: 22 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ; ರಕ್ಷಣಾ ತಂಡದಿಂದ ಶೋಧ

Prasthutha|

ಮಾಸ್ಕೋ: ರಷ್ಯಾದಲ್ಲಿ 22 ಜನರಿದ್ದ ಹೆಲಿಕಾಪ್ಟರ್ ರಷ್ಯಾದ ಪೂರ್ವದಲ್ಲಿರುವ ಕಮ್ಚಾಟ್ಕಾ ಪೆನಿನ್ಸುಲಾ ದ್ವೀಪ ಪ್ರದೇಶದಲ್ಲಿ ಕಣ್ಮರೆಯಾಗಿರುವುದಾಗಿ ವರದಿಯಾಗಿದೆ.

- Advertisement -

ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜೆನ್ಸಿಯ ಪ್ರಾಥಮಿಕ ವರದಿಗಳಿಂದ ಹೆಲಿಕಾಪ್ಟರ್ ನಾಪತ್ತೆಯಾಗಿರುವ ವಿಚಾರ ದೃಢಪಡಿಸಲಾಗಿದೆ ಮತ್ತು ಇಂಟರ್ ಫ್ಯಾಕ್ಸ್ ಸುದ್ದಿ ಸಂಸ್ಥೆ ಶನಿವಾರ ವಿಚಾರ ಬಹಿರಂಗಪಡಿಸಿದೆ.


ಹೆಲಿಕಾಪ್ಟರ್ ನಲ್ಲಿ 19 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಹೆಲಿಕಾಪ್ಟರ್ ನಾಪತ್ತೆಯಾಗಿರುವ ಬೆನ್ನಲ್ಲೇ ರಕ್ಷಣಾ ತಂಡ ಹುಡುಕಾಟ ಆರಂಭಿಸಿದೆ.

- Advertisement -


ಅಧಿಕಾರಿಗಳ ಮಾಹಿತಿ ಪ್ರಕಾರ, ಎಂಐ -8 ಹೆಲಿಕಾಪ್ಟರ್ ಕಮ್ಚಾಟ್ಕಾ ಪ್ರದೇಶದ ವಾಚ್ಕಜೆಟ್ಸ್ ನಿಂದ ಟೇಕ್ ಆಫ್ ಆಗಿದ್ದು ಇದಾದ ಬಳಿಕ ತನ್ನ ಸಂಪರ್ಕ ಕಳೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.



Join Whatsapp