ಉಕ್ರೇನ್ ಕ್ಷಿಪಣಿ ಫ್ಯಾಕ್ಟರಿ ಮೇಲೆ ರಷ್ಯಾ ದಾಳಿ; ರಷ್ಯಾ ನೌಕಾಪಡೆಯ ಪ್ರಮುಖ ಯುದ್ಧನೌಕೆ ಕಪ್ಪು ಸಮುದ್ರದಲ್ಲಿ ಮುಳುಗಡೆ

Prasthutha|

ಕೀವ್: ರಷ್ಯಾ ಉಕ್ರೇನ್ ಯುದ್ಧ ಮುಂದುವರಿದಿದ್ದು, ಇದೀಗ ಉಕ್ರೇನ್ನೇ ಪ್ರಮುಖ ರಾಕೆಟ್ ಫ್ಯಾಕ್ಟರಿ ಮೇಲೆ ರಷ್ಯಾ ದಾಳಿ ನಡೆಸಿದೆ.

- Advertisement -

ಉಕ್ರೇನ್ ಮೇಲಿನ ದಾಳಿಯಲ್ಲಿ ಮುಂಚೂಣಿಯಲ್ಲಿದ್ದ ರಷ್ಯಾ ನೌಕಾಪಡೆಯ ಪ್ರಮುಖ ಯುದ್ಧನೌಕೆ ಕಪ್ಪು ಸಮುದ್ರದಲ್ಲಿ ಮುಳುಗಿದ್ದು, ಉಕ್ರೇನ್ ಪಡೆಗಳು ನಡೆಸಿದ ಕ್ರೂಸ್ ಕ್ಷಿಪಣಿಯಿಂದ ಯುದ್ಧನೌಕೆ ಮುಳುಗಿದೆ ಎಂಬ ಉಕ್ರೇನ್ ಪ್ರತಿಪಾದನೆಯನ್ನು ಅಮೆರಿಕ ಬೆಂಬಲಿಸಿದೆ.

- Advertisement -

ಕೀವ್ನಪ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇದ್ದ ವೈಝರ್ ಘಟಕದ ಮೇಲೆ ರಾತ್ರಿಯಿಡೀ ರಷ್ಯನ್ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಘಟಕಕ್ಕೆ ತೀವ್ರ ಹಾನಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಫ್ಯಾಕ್ಟರಿಯ ಮೇಲೆ ದಾಳಿ ಮಾಡಲು ಧೀರ್ಘ ಅಂತರ ಸಾಮರ್ಥ್ಯದ ಸಾಗರ ಆಧರಿತ ನೆಪ್ಚೂನ್ ಕ್ರೂಸ್ ಕ್ಷಿಪಣಿಗಳನ್ನು ಬಳಸಿದ್ದಾಗಿ ರಷ್ಯಾ ಹೇಳಿಕೊಂಡಿದ್ದು, ಇದು ರಷ್ಯನ್ ಯುದ್ಧನೌಕೆ ಮುಳುಗಲು ಕಾರಣವಾಗಿದೆ  ಎನ್ನಲಾಗಿದೆ.

ಐದು ಬಾರಿ ದಾಳಿ ನಡೆದಿದ್ದು, ಮೊಸ್ಕ್ ವಾ ಯುದ್ಧನೌಕೆಗೆ ಹಾನಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp