ಪುಟಿನ್‌ ವಿರುದ್ಧ ಬಂಡಾಯವೆದ್ದಿದ್ದ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ಮೃತ್ಯು

Prasthutha|

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡಾಯ ಎದ್ದಿದ್ದ ಖಾಸಗಿ ಭದ್ರತಾ ಕಂಪನಿ ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ.

- Advertisement -

ಬ್ಯುಸಿನೆಸ್​ ಜೆಟ್ ವಿಮಾನವು ಮಾಸ್ಕೋದ ವಾಯುವ್ಯ ಭಾಗದಲ್ಲಿ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿದ್ದ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ TASS ತಿಳಿಸಿದೆ.

ಹಿಂದೊಮ್ಮೆ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್​ಗೆ ಆಪ್ತರಾಗಿದ್ದ 62 ವರ್ಷದ ಅರೆಸೈನಿಕ ನಾಯಕ ಪ್ರಿಗೊಜಿನ್, ತಮ್ಮ ದೇಶದ ಉನ್ನತ ಅಧಿಕಾರಿಗಳನ್ನು ಟೀಕಿಸುತ್ತಾ ಕೊನೆಗೆ ಜೂನ್ ಅಂತ್ಯದಲ್ಲಿ ರಷ್ಯಾ ಸರ್ಕಾರದ ವಿರುದ್ಧ ಅಲ್ಪಾವಧಿಯ ದಂಗೆ ನಡೆಸಿದ್ದರು. ನಿರ್ದಿಷ್ಟವಾಗಿ ಹಿಂಸಾತ್ಮಕ ಯುದ್ಧಭೂಮಿ ತಂತ್ರಗಳಿಗೆ ಹೆಸರುವಾಸಿಯಾದ ಆತನ ಪಡೆಗಳು ಉಕ್ರೇನಿಯನ್ ಫ್ರಂಟ್​ನಲ್ಲಿ ರಷ್ಯಾಕ್ಕಾಗಿ ಹಲವಾರು ಯುದ್ಧಗಳನ್ನು ಮುನ್ನಡೆಸಿದ್ದವು.

Join Whatsapp