ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಉದ್ಯೋಗ: ಅರ್ಜಿ ಆಹ್ವಾನ

Prasthutha|

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ಯೋಜನೆಯಡಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿ ವಿಭಾಗ ಕಛೇರಿಯಲ್ಲಿ ಖಾಲಿ ಇರುವ ಜಿಲ್ಲಾ MIS ಸಮಾಲೋಚಕರ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ.

- Advertisement -


ವಿದ್ಯಾರ್ಹತೆ ಮತ್ತು ಅನುಭವ • ಅಭ್ಯರ್ಥಿಗಳು ಸಂಖ್ಯಾಶಾಸ್ತ್ರ / ಎಂಸಿಎ / ಎಂಎಸ್ಸಿ ಕಂಪ್ಯೂಟರ್ ಸೈನ್ಸ್ / ಬಿಇ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಪೋಸ್ಟ್ ಗ್ರಾಜುಯೇಷನ್ ಅನ್ನು ಅಂಗೀಕೃತ ವಿವಿಗಳಿಂದ ಪಾಸ್ ಮಾಡಿರಬೇಕು.


• 3-5 ವರ್ಷಗಳ ವರೆಗೆ ಡಾಟಾ ಸೈನ್ಸ್, ಡಾಟಾ ರಿಸರ್ಚ್ ನಲ್ಲಿ ಕಾರ್ಯಾನುಭವ ಪಡೆದಿರಬೇಕು. ಇಂಗ್ಲಿಷ್ / ಕನ್ನಡ ವಿಷಯದಲ್ಲಿ ಅರಿವು ಇರಬೇಕು.

- Advertisement -


ಮಾಸಿಕ ಸಮಾಲೋಚನಾ ಶುಲ್ಕ ರೂ.25,000.


ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ವೆಬ್ ವಿಳಾಸ https://nicforms.nic.in/nicforms_designer/form_render.php ಕ್ಕೆ ಭೇಟಿ ನೀಡಿ.
  • ತೆರೆದ ವೆಬ್ ಪುಟದಲ್ಲಿ ಅರ್ಜಿ ನಮೂನೆ ಓಪನ್ ಆಗಿರುತ್ತದೆ. ಕೇಳಲಾದ ಎಲ್ಲ ಮಾಹಿತಿಗಳನ್ನು ನೀಡಿ.
  • ಕೆಲವು ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ಲೋಡ್ ಮಾಡಬೇಕಿರುತ್ತದೆ. ತಪ್ಪದೇ ಸರಿಯಾದ ದಾಖಲೆ ಅಪ್ಲೋಡ್ ಮಾಡಿ.
  • ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಮುಂದಿನ ರೆಫರೆನ್ಸ್ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

  • ಪ್ರಮುಖ ದಿನಾಂಕಗಳು
    ಆನ್ಲೈನ್ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 18-10-2024
    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 01-11-2024


Join Whatsapp