ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಶುಕ್ರವಾರ 104 ಪೈಸೆಗಳಷ್ಟು ಇಳಿಕೆ ಆಗಿದೆ. 2019ರ ಆಗಸ್ಟ್ 5ರ ನಂತರ ರೂಪಾಯಿಯು ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತ ಇದು.
ಶುಕ್ರವಾರದ ಅಂತ್ಯಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 73.47 ಆಗಿತ್ತು. ದಿನದ ವಹಿವಾಟಿನ ನಡುವಿನಲ್ಲಿ ರೂಪಾಯಿಯು 73.51ರ ಮಟ್ಟಕ್ಕೂ ಕುಸಿದಿತ್ತು. ನಂತರ ತುಸು ಚೇತರಿಕೆ ದಾಖಲಿಸಿತು.
‘ಅಮೆರಿಕದಲ್ಲಿ ಬಾಂಡ್ ಗಳಿಕೆಯು ಏರಿಕೆ ಕಂಡಿದೆ. ಅಲ್ಲಿನ ಅರ್ಥ ವ್ಯವಸ್ಥೆಯು ಸಹಜ ಸ್ಥಿತಿಗೆ ಬರುತ್ತಿರುವ ಸೂಚನೆಗಳು ಇವೆ. ಇದರಿಂದಾಗಿ ಡಾಲರ್ ಮೌಲ್ಯ ಹೆಚ್ಚಾಗಿದೆ’ ಎಂದು ರೆಲಿಗೇರ್ ಬ್ರೋಕಿಂಗ್ ಸಂಸ್ಥೆಯ ಇಂಧನ ಮತ್ತು ಕರೆನ್ಸಿ ಸಂಶೋಧನಾ ವಿಭಾಗದ ಉಪಾಧ್ಯಕ್ಷೆ ಸುಗಂಧಾ ಸಚದೇವ್ ಹೇಳಿದ್ದಾರೆ.