ಹಿಂದುತ್ವ ನೀತಿಯನ್ನು ಅಳವಡಿಸಿದರೆ RSS ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತದೆ: ಅರುಣ್ ಕುಮಾರ್

Prasthutha|

ಧಾರವಾಡ: RSS ನಿರ್ದೇಶನದಂತೆ ಹಿಂದುತ್ವ ಪರ ನಿಲುವಿನೊಂದಿಗೆ ಕಾಂಗ್ರೆಸ್ ಕೈ ಜೋಡಿಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿಯೂ RSS ಕೆಲಸ ಮಾಡಲು ಸಿದ್ಧ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತಾಡಿದ ಅರುಣ್ ಕುಮಾರ್, ಕಾಂಗ್ರೆಸ್ ನಾಯಕರು ರಾಮಮಂದಿರ ನಿರ್ಮಾಣದ ಪರವಾಗಿ ಹಾಗೂ ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ಕಿತ್ತು ಹಾಕುವುದಾಗಿ ಘೋಷಣೆ ಮಾಡಿದಾಗ, ಹಿಂದೂಪರ ನಿಲುವು ಹೊಂದಿದ್ದರೆ ಆರೆಸ್ಸೆಸ್ಸ್ ಅವರ ಜೊತೆಗಿದ್ದು ಅವರ ಪರವಾಗಿ ಕೆಲಸ ಮಾಡುತ್ತಿತ್ತು. ಈ ಹಿಂದೆಯೇ ಸಂಘದ ಸರಸಂಚಾಲಕರು ಈ ಹೇಳಿಕೆ ನೀಡಿದ ಉದಾಹರಣೆಗಳಿವೆ ಎಂದು ಹೇಳಿದರು.

ಬಿಜೆಪಿಯು RSS ಹಾಕಿದ ಗೆರೆ ದಾಟಲ್ಲ, ಜೆಪಿ ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ನೀಡಬೇಕಾದರೂ ಆರ್ಎಸ್ಎಸ್ ನೇಮಿಸಿದ ಪಕ್ಷದ ಸಂಘಟನಾ ಕಾರ್ಯದರ್ಶಿಗೆ ಪತ್ರ ನೀಡುವ ನಿಯಮವಿದೆ. ಹಾಗಾಗಿ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ. ಇನ್ನು ಕಾಂಗ್ರೆಸ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಪೇಕ್ಷಿಸುವ ನಿಲುವು ಹಾಗೂ ಹಿಂದುತ್ವ ನೀತಿಯನ್ನು ಅಳವಡಿಸಿಕೊಂಡರೆ ಕಾಂಗ್ರೆಸ್ ಪರವಾಗಿಯೂ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Join Whatsapp