ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ಮುಂದಾಗಿರುವ ಆರ್‌ಎಸ್ಎಸ್

Prasthutha|

ಚೆನ್ನೈ: ಕೆಲವು ಷರತ್ತುಗಳೊಂದಿಗೆ ಪಥ ಸಂಚಲನ ನಡೆಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ನಿರ್ಧರಿಸಿದ್ದು, ನವೆಂಬರ್ 6 ರಂದು ನಿಗದಿಯಾಗಿದ್ದ ಪಥ ಸಂಚಲನವನ್ನು ಶನಿವಾರಕ್ಕೆ  ಮುಂದೂಡಿದೆ.

- Advertisement -

ಆಡಿಟೋರಿಯಂ ಅಥವಾ ಕಾಂಪೌಂಡ್‌ನ ನಾಲ್ಕು ಗೋಡೆಗಳ ಒಳಗೆ ಮಾತ್ರ ಪಥ ಸಂಚಲನ ನಡೆಸಬೇಕು ಎಂದು ಹೈಕೋರ್ಟ್ ನಿರ್ಬಂಧ ವಿಧಿಸಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇತರ ರಾಜ್ಯಗಳಲ್ಲಿ ಮಾಡಿದಂತೆ ಸಾರ್ವಜನಿಕ ರಸ್ತೆಗಳಲ್ಲಿ ಪಥ ಸಂಚಲನ ನಡೆಸಲು ಅನುಮತಿ ಪಡೆಯಲು ಹೈಕೋರ್ಟ್‌ನಲ್ಲಿ  ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು RSS ಮೂಲಗಳು ತಿಳಿಸಿವೆ.

ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮತ್ತು ಡಾ ಅಂಬೇಡ್ಕರ್ ಅವರ 125 ನೇ ಜನ್ಮದಿನದ ಅಂಗವಾಗಿ, RSS ನ ತಮಿಳುನಾಡು ಘಟಕವು ಅಕ್ಟೋಬರ್ 2 ರಂದು 50 ಸ್ಥಳಗಳಲ್ಲಿ ಪಥ ಸಂಚಲನ ನಡೆಸಲು ಯೋಜಿಸಿತ್ತು. ಇದಕ್ಕಾಗಿ ಪೊಲೀಸರಿಂದ ಅನುಮತಿ ಕೇಳಲಾಗಿತ್ತು. ಆದರೆ ಪೊಲೀಸರು ಅನುಮತಿಸದ ಹಿನ್ನೆಲೆಯಲ್ಲಿ  ಹೈಕೋರ್ಟ್ ಮೆಟ್ಟಿಲೇರಿತ್ತು .



Join Whatsapp