ದೇಶದ ಆರ್ಥಿಕತೆಯ ಬಗ್ಗೆ ಆರೆಸ್ಸೆಸ್ ಹೇಳಿಕೆ: ‘ಮೋದಿ ಹಠಾವೂ’ ಯೋಜನೆಯ ಮುನ್ನುಡಿಯೇ? ಎಂದ ಕಾಂಗ್ರೆಸ್

Prasthutha|

ಬೆಂಗಳೂರು: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಶುರು ಮಾಡಿದ ಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ! “ಸಬ್ ಚೆಂಗಾಸಿ” ಎನ್ನುತ್ತಿದ್ದ ಬಿಜೆಪಿ ನಾಯಕರು RSS ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ! ಈ ಬೆಳವಣಿಗೆ ‘ಮೋದಿ ಹಠಾವೂ’ ಯೋಜನೆಯ ಮುನ್ನುಡಿಯೇ? ಎಂದು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಮೋದಿ ಆಡಳಿತದ “ಅಚ್ಛೆ ದಿನ್”ಗಳನ್ನು RSS ವಿಮರ್ಶಿಸಲು ಶುರು ಮಾಡಿದೆ. ಪಾಕ್, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆ ಹಂತಕ್ಕೆ ತಲುಪುತ್ತಿದೆ ಎಂದಾಗ ಒಪ್ಪದಿದ್ದ ಬಿಜೆಪಿ ಈಗ ತಮ್ಮ ಮಾಲೀಕರ ಅಭಿಪ್ರಾಯ ಒಪ್ಪುವುದೇ? ಬಿಜೆಪಿ ಈಗ ಒಪ್ಪುವುದು ಯಾವುದನ್ನು? ಸಬ್ ಚೆಂಗಾಸಿ ಎಂದ ಮೋದಿ ಮಾತನ್ನೊ?RSS ಹೇಳಿದ ಮಾತನ್ನೊ? ಎಂದು ಪ್ರಶ್ನಿಸಿದೆ.

ಎಲ್ಲವನ್ನೂ, ಎಲ್ಲರನ್ನೂ, ಎಲ್ಲದರಲ್ಲೂ ವಿಭಜನೆ ಮಾಡಿ ಆಳುವ ಸ್ವತಃ ಬಿಜೆಪಿಯೇ ವಿಭಜನೆಯ ಹಾದಿಯಲ್ಲಿದೆ. ಬಿಜೆಪಿ ನಾಯಕರಿಗೆ ಭಾರತ್ ಜೋಡೋ ಯಾತ್ರೆಗೆ ಆಹ್ವಾನಿಸುತ್ತೇವೆ, ಬನ್ನಿ ನಾಲ್ಕು ಹೆಜ್ಜೆ ಹಾಕಿ #BJPvsBJP ಕಿತ್ತಾಟದಲ್ಲಿ ಒಡೆದ ಮಡಕೆಯಾಗಿರುವ ನಿಮ್ಮ ಪಕ್ಷವನ್ನು ಜೋಡಿಸಿಕೊಳ್ಳಿ…! ನಮ್ಮ ಯಾತ್ರೆಯ ಸದಾಯಶಯವೇ ಜೋಡಿಸುವುದು ಎಂದು ಕಾಂಗ್ರೆಸ್ ಕುಟುಕಿದೆ.



Join Whatsapp