ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಮಾಪಿಳ್ಳೆ ದಂಗೆಯನ್ನು ತಾಲಿಬಾನ್ ದಂಗೆ ಎಂದ RSS ಮುಖಂಡ ರಾಮ್ ಮಾಧವ್

Prasthutha|

ಕೇರಳ : ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಮಾಪಿಳ್ಳೆ ದಂಗೆಯನ್ನು ತಾಲಿಬಾನ್ ಮನಸ್ಥಿತಿಯ ಹೋರಾಟ ಎಂದು ವಿವಾದಾತ್ಮಕ ಹೇಳಿಕೆಯನ್ನು ಆರೆಸ್ಸಸ್ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ. ತಾಲಿಬಾನ್‌ ಎಂಬುದು ಒಂದು ಮನಸ್ಥಿತಿ. ಆ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಭಾರತೀಯ ಸಮಾಜ ಕೇರಳ. ಅಲ್ಲಿನ ಮೊಪ್ಲಾ ದಂಗೆಯು ತಾಲಿಬಾನಿ ಮನಸ್ಥಿತಿಯ ಅಭಿವ್ಯಕ್ತಿಯಾಗಿತ್ತು ಎಂದು ಬಿಜೆಪಿ ರಾಷ್ಟ್ರ ಘಟಕದ ಮಾಜಿ ಪ್ರಧಾನಕಾರ್ಯದರ್ಶಿ, ಆರ್‌ಎಸ್‌ಎಸ್‌ ನಾಯಕ ರಾಮ್‌ ಮಾಧವ್‌ ಹೇಳಿದ್ದಾರೆ.

- Advertisement -

ತಾಲಿಬಾನ್ ಕೇವಲ ಭಯೋತ್ಪಾದಕ ಸಂಘಟನೆಯಲ್ಲ. ಅದು ಒಂದು ಮನಸ್ಥಿತಿ. ಕಳೆದ ಶತಮಾನದಲ್ಲಿ, ತಾಲಿಬಾನ್‌ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಸಮಾಜ ಕೇರಳವಲ್ಲದೆ ಮತ್ಯಾವುದೂ ಅಲ್ಲ. ಮೊಪ್ಲಾ ದಂಗೆಯು ಭಾರತದಲ್ಲಿನ ತಾಲಿಬಾನಿ ಮನಸ್ಥಿತಿಯ ಮೊದಲ ಅಭಿವ್ಯಕ್ತಿಯಾಗಿದೆ, ಎಂದು ಮಾಧವ್‌ ಹೇಳಿದರು.

ಇದರ ಬಗ್ಗೆ ತಿಳಿಯಲು ಪ್ರಪಂಚಕ್ಕೆ ಯಾವುದೇ ಮಾರ್ಗವಿಲ್ಲದ ಕಾರಣ, ಹಿಂಸಾಚಾರವನ್ನು ಮರೆಮಾಚಲು ಪ್ರಯತ್ನಿಸಲಾಯಿತು. ಇದು ಬ್ರಿಟಿಷರ ವಿರುದ್ಧದ ಚಳುವಳಿ ಅಥವಾ ‘ಜಮೀನ್ದಾರರ’ ವಿರುದ್ಧದ ಕಮ್ಯುನಿಸ್ಟ್ ಕ್ರಾಂತಿ ಎಂದು ಬಿಂಬಿಸಲಾಗಿದೆ ಎಂದು ಅವರು ತಿಳಿಸಿದರು. ರಾಮ್‌ ಮಾದವ್‌ ಹೇಳಿದ ಮಾಪಿಳ್ಳೆ ದಂಗೆಯು ಕೇರಳದ ಮಲಬಾರ್‌ ಪ್ರಾಂತ್ಯದಲ್ಲಿ 1921ರ ಆಗಸ್ಟ್‌ 20ರಿಂದ 1922ರ ವರೆಗೆ ನಡೆದಿತ್ತು.

Join Whatsapp