ಪಠ್ಯದಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಪಾಠ ಸೇರ್ಪಡೆ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡನೆ

Prasthutha|

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾಠ ಕೈ ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು 10ನೇ ತರಗತಿ (ಕನ್ನಡ ವಿಷಯ 5ನೇ ಘಟಕ) ಯಲ್ಲಿ ಇದ್ದ ಪಾಠವನ್ನು ಕೈಬಿಟ್ಟು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಈ ಮೂಲಕ ದೇಶಪ್ರೇಮಿ ಭಗತ್ ಸಿಂಗ್ ಗೆ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹಿರ್ ಹುಸೇನ್ ಆರೋಪಿಸಿದೆ.
ಶಿವಾಜಿನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಭಗತ್ ಸಿಂಗ್ ಪಾಠ ಕೈಬಿಟ್ಟು, ಕೇಸರೀಕರಣ ಉದ್ದೇಶದಿಂದ ಹೆಡಗೇವಾರ್ ಗದ್ಯ ಪಾಠ ಅಳವಡಿಕೆ ಆರೋಪ ಕೇಳಿ ಬಂದಿದೆ. ಬಿಜೆಪಿ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸಲು ಮುಂದಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಕೈಬಿಟ್ಟು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಮನು ಸಂಸ್ಕೃತಿಯನ್ನು ಹೊಂದಿರುವ ಆರ್ ಎಸ್ಎಸ್ ಸಂಸ್ಥಾಪಕ ಹೆಗ್ಡೆವಾರ್ ಅವರನ್ನು ಪಠ್ಯದಲ್ಲಿ ಅಳವಡಿಸಿಲುವ ಮೂಲಕ ಸರ್ಕಾರ ಮಕ್ಕಳಿಗೆ ಯಾವ ಸಂದೇಶ ನೀಡಲು ಹೊರಟಿದೆ ಎನ್ನುವುದು ಸ್ಪಷ್ಟಪಡಿಸಬೇಕಿದೆ. ಭಾರತ ಜಾತ್ಯತೀತ, ಬಹುಸಂಸ್ಕೃತಿ, ವಿವಿಧತೆಯಲ್ಲಿ ಏಕತೆ, ಸಾರ್ವಭೌಮ ರಾಷ್ಟ್ರವಾಗಿದ್ದನ್ನು ಮರೆತು ಈಗ ಹಿಂದು ರಾಷ್ಟ್ರವನ್ನು ಮಾಡುವ ಹುನ್ನಾರ ನಡೆಸಿರುವ ಬಿಜೆಪಿ ಸರ್ಕಾರ ಇದಕ್ಕೆ ಸಾಕಷ್ಟು ತಯಾರಿ ನಡೆಸಿ ಕಾರ್ಯರೂಪಕ್ಕೆ ಬಂದಿದ್ದು ಅನೇಕ ಘಟನೆಗಳಿಂದ ತಿಳಿಯಬಹುದು. ಆರ್ ಎಸ್ ಎಸ್ ನಾಯಕರ ಪಾಠ ಅಳವಡಿಸುವುದು ಮುಂದುವರೆದ ಭಾಗವಾಗಿದೆ. ಮೊದಲನೆಯದಾಗಿ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರ ಆಯ್ಕೆಯೇ ತಪ್ಪು ನಿರ್ಧಾರ. ಈ ಹಿಂದೆ ಜಾತ್ಯತೀತ, ಸಮಾನ ಮನಸ್ಕರ ಮನೊಭಾವನೆ ಒಳ್ಳವರಿಗೆ ಈ ಸ್ಥಾನ‌ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಲ ಪಂಥಿಯ ನಾಯಕರಿಗೆ ಈ ಸ್ಥಾನ ನೀಡಿದಾಗ ಇನ್ನೇನು ನಿರೀಕ್ಷಿಸಲು ಸಾಧ್ಯ.

- Advertisement -

10ನೇ ತರಗತಿಯಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಡಾ ಹೆಡಗೇವಾರ್ ಪಠ್ಯ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯಿಸಿ, ಭಾಷಣ ಅಳವಡಿಕೆ ಬಗ್ಗೆ ನನಗೆ ಪೂರ್ಣ ಮಾಹಿತಿ ಗೊತ್ತಿಲ್ಲ. ಹೆಡಗೇವಾರ್ ಭಾಷಣದ ತುಣುಕನ್ನು ಮಾತ್ರ ಪಠ್ಯಕ್ಕೆ ಸೇರಿಸಿದ್ದೇವೆ. ಪಠ್ಯದಿಂದ ಭಗತ್ ಸಿಂಗ್ ಅವರನ್ನು ಬಿಟ್ಟಿಲ್ಲ. ಪಠ್ಯ ಪುಸ್ತಕದ ಸಮಿತಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಅನೇಕ ಶಿಕ್ಷಣ ತಜ್ಞರಿದ್ದರು. ಯಾವುದು ಇರಬೇಕು, ಇರಬಾರದು ಎಂದು ಸಂಶೋಧನೆ ಮಾಡಲಾಗಿದೆ. ಶಿಕ್ಷಣ ತಜ್ಞರಿಂದ ಪಠ್ಯ ಪುಸ್ತಕಗಳನ್ನು ತರುವಂತಹ ಕೆಲಸ ಆಗಿದೆ. ಊಹಾಪೋಹಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಲ್ಲ. ಪುಸ್ತಕದಲ್ಲಿ ಮಕ್ಕಳಿಗೆ ಹೇಳಬಾರದ್ದು ಇಲ್ಲ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಇದ್ದ ಪಾಠಗಳನ್ನು ಪಠ್ಯದಲ್ಲಿ ಯಥಾವತ್ತಾಗಿ ಮುಂದುವರೆಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟಕ್ಕೆ ಎಚ್ಚರಿಕೆ ನೀಡಿದರು.
ಹಿಂದೂಗಳನ್ನು ಒಗ್ಗೂಡಿಸಿದರೆ ಧರ್ಮ ಅದಾಗಿಯೇ ಉಳಿಯುತ್ತದೆ. ಅದು ಬಿಟ್ಟು ಕೈಗೆ ಚಾಕು ಕೊಟ್ಟರೆ ಮಕ್ಕಳ ಭವಿಷ್ಯವೇನು?. ಭಾಷಣ ಮಾಡಿ ಮಕ್ಕಳ ಮನಸ್ಸು ಹಾಳು ಮಾಡುತ್ತಾರೆ. ಇದೇ ಮಕ್ಕಳು ಭಾಷಣ ಕೇಳಿ ಅನ್ಯಧರ್ಮದವರಿಗೆ ಚಾಕು ಹಾಕುತ್ತಾರೆ. ವೈಯಕ್ತಿಕ ದ್ವೇಷನೂ ಹುಟ್ಟುತ್ತದೆ. ಎರಡು ಧರ್ಮಗಳ ನಡುವೆ ಸಂಘರ್ಷನೂ ಆಗುತ್ತದೆ. ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಹೇಳಿಕೊಡೋದು ಸರಿನಾ? ಬಜರಂಗದಳದಿಂದ ಇದೆಂಥ ಹಿಂಸಾತ್ಮಕ ಟ್ರೈನಿಂಗ್ ? ಧರ್ಮ ಉಳಿಸೋದು ಅಂದರೆ ಚುಚ್ಚೋದಾ, ಶೂಟ್ ಮಾಡೋದಾ? ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.



Join Whatsapp