ಸಿಗರೇಟು ಸೇದುತ್ತಿದ್ದ ವ್ಯಕ್ತಿಯನ್ನು ಬೆದರಿಸಿ 95 ಸಾವಿರ ನಗದು, 30 ಗ್ರಾಂ ಚಿನ್ನ ಸುಲಿಗೆ

Prasthutha|

ಬೆಂಗಳೂರು: ಬೆನ್ನಿಗಾನಹಳ್ಳಿ ಅಂಡರ್ ಪಾಸ್ ಬಳಿ ಕಾರಿನೊಳಗೆ ಧೂಮಪಾನ ಮಾಡುತ್ತಿರುವುದನ್ನು ಕಂಡು ಕೇಸ್ ದಾಖಲಿಸುವುದಾಗಿ ಬೆದರಿಸಿ 95 ಸಾವಿರ ನಗದು 30 ಗ್ರಾಂ ಚಿನ್ನವನ್ನು ಸುಲಿಗೆ ಮಾಡಿದ್ದಾನೆ ಎಂದು ಸ್ಕೂಟರ್ ಸವಾರನೊಬ್ಬನ ವಿರುದ್ಧ ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕಂಪನಿಯ ಅಸೆಸ್’ಮೆಂಟ್ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ.
ನಾಗವಾರಪಾಳ್ಯದ ಅಧಿಕಾರಿ ಧನಂಜಯ್ (31) ಕಾರಿನಲ್ಲಿ ಕಚೇರಿಗೆ ಹೋಗುವಾಗ ಸಿಗರೇಟ್ ಸೇದುತ್ತಿದ್ದರು. ಇದನ್ನು ಗಮನಿಸಿದ ಸ್ಕೂಟರ್’ನಲ್ಲಿ ಬಂದ ದುಷ್ಕರ್ಮಿಯು ಕಾರಿನ ಬಳಿ ಬಂದು ಧೂಮಪಾನ ಮಾಡಿದ್ದಕ್ಕೆ ಪೊಲೀಸರು ಬಂಧಿಸಲಿದ್ದಾರೆ ಎಂದು ಬೆದರಿಕೆ ಹಾಕಿದ್ದಾನೆ.

- Advertisement -


ಬಳಿಕ ನಾಯರ್ ಅವರ ಕಾರಿನ ಬಾಗಿಲನ್ನು ಬಲವಂತವಾಗಿ ತೆರೆಸಿ ಒಳನುಗ್ಗಿದ ದುಷ್ಕರ್ಮಿಯು ಕೆಲವು ಗುರುತಿನ ಚೀಟಿಗಳನ್ನು ತೋರಿಸಿ, ನನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿಕೊಂಡು ನನ್ನ ಬಳಿ ಗನ್ ಇದೆ ನಾನು ಹೇಳಿದ ಹಾಗೆ ಮಾಡು ಎಂದು ಹೆದರಿಸಿದ್ದಾನೆ.
ಬಳಿಕ ನಾಯರ್ ಅವರ ಮೊಬೈಲ್ ಮತ್ತು ವ್ಯಾಲೆಟ್ ಕಸಿದು ಎಟಿಎಂ ಬಳಿ ಅವರ ಕಾರನ್ನು ನಿಲ್ಲಿಸಿ ಹಣ ಡ್ರಾ ಮಾಡುವಂತೆ ಒತ್ತಾಯಿಸಿ ನಾಯರ್ ಅವರ ಕ್ರೆಡಿಟ್ ಕಾರ್ಡ್ ಬಳಸಿ 50 ಸಾವಿರ ಮತ್ತು ಡೆಬಿಟ್ ಕಾರ್ಡ್ನಿಂದ 45 ಸಾವಿರ ಸೇರಿ 95 ಸಾವಿರ ರೂ ಜೊತೆಗೆ ಸುಮಾರು 30 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಸಿದಿದ್ದಾನೆ.
ನಂತರ ದುಷ್ಕರ್ಮಿಯು ನಾಯರ್’ಗೆ ಕೊಲೆ ಬೆದರಿಕೆ ಹಾಕಿ, ಈ ಘಟನೆಯನ್ನು ಯಾರಿಗಾದರೂ ಹೇಳಿದರೆ ನಿನ್ನ ಕುಟುಂಬವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಂತರ ಆತ ಬೆನ್ನಿಗಾನಹಳ್ಳಿ ಅಂಡರ್’ಪಾಸ್’ನಲ್ಲಿ ಬಿಟ್ಟು, ಸ್ಕೂಟರ್’ನಲ್ಲಿ ಪರಾರಿಯಾಗಿದ್ದು, ಈ ವಿಷಯವನ್ನು ನಾಯರ್ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಾಗ ಪೊಲೀಸರಿಗೆ ದೂರು ದಾಖಲಿಸಲು ನೀಡಿದ ಸಲಹೆ ಬಳಿಕ ನಾಯರ್ ರಾಮಮೂರ್ತಿನಗರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.


ಐಪಿಸಿ ಸೆಕ್ಷನ್ 384 ರ ಅಡಿಯಲ್ಲಿ ಸುಲಿಗೆ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಅಂಡರ್ ಪಾಸ್ ಮತ್ತು ಎಟಿಎಂ ನಡುವಿನ ವಿಸ್ತರಣೆಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದು ಅದರಲ್ಲಿ ದುಷ್ಕರ್ಮಿಯ ಕೃತ್ಯ ಸೆರೆಯಾಗಿಲ್ಲ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp