ನಕಲಿ ಆಭರಣಗಳನ್ನಿಟ್ಟು 58.60 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ದೋಚಿದ್ದ ಮಹಿಳೆ ಸೆರೆ

Prasthutha|

ಬೆಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ನಕಲಿ ಆಭರಣಗಳನ್ನಿಟ್ಟು 58.60 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣಗಳನ್ನು ದೋಚಿದ್ದ ಮಹಿಳೆಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

- Advertisement -

ಬೀದರ್’ನ ವಾಣಿ ವಾಡೇಕರ್ (22 )ಬಂಧಿತ ಆರೋಪಿಯಾಗಿದ್ದಾಳೆ. ಆಕೆಯಿಂದ 58.60 ಲಕ್ಷ ರೂ. ಮೌಲ್ಯದ ಚಿನ್ನದ ಡೈಮಂಡ್ ಇರುವ 36.455 ಗ್ರಾಂ ಸರ, 54 ಗ್ರಾಂ ತೂಕದ ಚೈನ್, ಒಂದು ಜೊತೆ 8.817 ಗ್ರಾಂ ವಜ್ರದ ಇಯರಿಂಗ್‍’ಗಳು, 21.34 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಯಲಹಂಕದ ಆರ್’ಎಂಜಡ್ ಗಲೇರಿಯಾ ಮಾಲ್’​ನಲ್ಲಿರುವ ತನಿಷ್ಕ್ ಜುವೆಲ್ಲರಿಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು.

- Advertisement -

ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಜುವೆಲ್ಲರಿ ಶಾಪ್​’ನಲ್ಲಿ ತನ್ನ ಕೈಚಳಕ ತೋರಿ ಚಿನ್ನ ತೋರಿಸುವ ಕೆಲಸ ಮಾಡುತ್ತಲೇ ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾಳೆ. ಚಿನ್ನ ಮತ್ತು ವಜ್ರದ ಆಭರಣಗಳ ಜಾಗದಲ್ಲಿ ನಕಲಿ ಆಭರಣಯಿಟ್ಟು ಮಾಲೀಕನಿಗೆ ಅನುಮಾನ ಬಾರದಂತೆ ಆತನಿಗೆ ಪಂಗನಾಮ ಹಾಕುತ್ತಿದ್ದವಳನ್ನು ಕೊನೆಗೆ ಬಂಧಿಸಲಾಗಿದೆ.

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವ ಯಲಹಂಕ‌ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.



Join Whatsapp