ಅನಂತಪುರಂ: ಅಧಿಕಾರಕ್ಕೆ ಬಂದರೆ ಪ್ರತೀ ಅರ್ಹ ಬಡ ಕುಟುಂಬಕ್ಕೆ ತಿಂಗಳಿಗೆ ₹5000 ಮೊತ್ತವನ್ನು ನೀಡುವ ಗ್ಯಾರಂಟಿಯನ್ನು ಕಾಂಗ್ರೆಸ್ ಘೋಷಿಸಿದೆ.
ಅನಂತಪುರಂನಲ್ಲಿ ನಡೆದ ಕಾಂಗ್ರೆಸ್ ಸಾರ್ವಜನಿಕ ಸಭೆಯಲ್ಲಿ ಈ ಹೊಸ ಘೋಷಣೆಯನ್ನು ಕಾಂಗ್ರೆಸ್ ಮಾಡಿದೆ. ಈ ಯೋಜನೆಗೆ ಇಂದಿರಮ್ಮ ಸಾರ್ವತ್ರಿಕ ಮೂಲ ಆದಾಯ ಎಂದು ಹೆಸರಿಟ್ಟಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಘೋಷಣೆಯನ್ನು ಕನ್ನಡದಲ್ಲೇ ಘೋಷಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದ ತಕ್ಷಣ ಸಾರ್ವತ್ರಿಕ ಮೂಲ ಆದಾಯ ಯೋಜನೆಯನ್ನು ಜಾರಿಗೆ ತರುವ ಮೂಲಕ ಪ್ರತೀ ಬಡ ಕುಟುಂಬಕ್ಕೆ ತಿಂಗಳಿಗೆ ಐದು ಸಾವಿರವನ್ನು ಕೊಡುವಂತಹ ಕೆಲಸವನ್ನು ಮಾಡಲಿದ್ದೇವೆ. ಇದು ನಮ್ಮ ಗ್ಯಾರಂಟಿ ಎಂದು ಖರ್ಗೆ ಘೋಷಿಸಿದರು.
We announce the first guarantee for the people of Andhra Pradesh: Indiramma Universal Basic Income Support guarantee.
— INC Andhra Pradesh (@INC_Andhra) February 26, 2024
Congress government will provide every poor family a sum of ₹5,000 per month.
We have kept our promises in the past and we will ensure the inclusive… pic.twitter.com/LJgULN9FMe