ಗೋಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ 40 ಸಾವಿರ ಕೋಟಿ ವಹಿವಾಟು: ಅಗ್ನಿ ಶ್ರೀಧರ್

Prasthutha|

ಬೆಂಗಳೂರು: ಜೈನ ಸಮುದಾಯದ ಕೆಲವರು ಗೋವಿನ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ವಾರ್ಷಿಕ 40 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ದ್ರಾವಿಡ ಸಂಘದ ಅಧ್ಯಕ್ಷ ಅಗ್ನಿ ಶ್ರೀಧರ್ ಆರೋಪಿಸಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಗೋವಿನ ಮಾಂಸ ರಫ್ತು ಮಾಡುವ ಉದ್ಯಮದಲ್ಲಿ ಈ ಹಿಂದೆ ಮುಸ್ಲಿಂ ಸಮುದಾಯವು ದೊಡ್ಡ ಪಾಲನ್ನು ಹೊಂದಿತ್ತು. ಮುಸ್ಲಿಮರನ್ನು ಈ ಉದ್ಯಮದಿಂದ ಹೊರಗಿಡಲು ಆರ್ ಎಸ್ ಎಸ್ ಮತ್ತು ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದೆ. ಈ ಹುನ್ನಾರದ ಹಿಂದೆ ಜೈನ ಸಮುದಾಯವಿದೆ’ ಎಂದು ದೂರಿದರು.


ದಲಿತರು, ಕ್ರಿಶ್ಚಿಯನ್ನರು ಹಸುವಿನ ಮಾಂಸವನ್ನು ಹೆಚ್ಚು ಸೇವಿಸುತ್ತಾರೆ. ಶ್ರೀಮಂತ ಮುಸ್ಲಿಮರು ಹಸುವಿನ ಮಾಂಸವನ್ನು ತಿನ್ನುವುದಿಲ್ಲ. ಆದರೆ, ಗೋಹತ್ಯೆಯ ವಿಷಯ ಮುನ್ನಲೆಗೆ ಬಂದಾಗಲೆಲ್ಲ ಇದನ್ನು ಮುಸ್ಲಿಮರ ಆಹಾರವೆಂಬಂತೆ ಬಿಂಬಿಸಲಾಗುತ್ತಿದೆ ಎಂದರು.

Join Whatsapp