ದಸರಾ ಆಚರಣೆಗೆ 30 ಕೋಟಿ ರೂ. ಅನುದಾನ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ

Prasthutha|

ಮೈಸೂರು: ಈ ಬಾರಿ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು 30 ಕೋಟಿ ರೂ ಅನುದಾನ ಕೇಳಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

- Advertisement -


ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಳ್ಳಿಯಲ್ಲಿ ಇಂದು ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿದರು.


ಈ ಹಿಂದೆ ಸಾಂಪ್ರದಾಯಿಕವಾಗಿ 9 ಆನೆಗಳನ್ನು ವೀರನಹೊಸಳ್ಳಿಯಿಂದ ಸ್ವಾಗತಿಸಿ, ಕಾಲ್ನಡಿಗೆಯ ಗಜಪಡೆ ಅರಮನೆ ಪ್ರವೇಶ ಮಾಡುತ್ತಿತ್ತು. ಆದರೆ ಕಾಲ್ನಡಿಗೆಯಲ್ಲಿಯೇ ಕರೆದುಕೊಂಡು ಬಂದರೆ ದಣಿವಾಗುತ್ತದೆ ಎಂದು 2004ರಿಂದ ವಾಹನದ ಮೂಲಕ ಕರೆತರಲಾಗುತ್ತಿದೆ. ಇಂದು ಒಂಬತ್ತು ಆನೆಗಳು ಬರುತ್ತವೆ. ಇನ್ನೂ ಐದು ಆನೆಗಳು ನಂತರ ಈ ತಂಡ ಸೇರಿಕೊಳ್ಳುತ್ತವೆ. ಒಟ್ಟು 14 ಆನೆಗಳನ್ನು ಜಂಬೂಸವಾರಿಯಲ್ಲಿ ಮಾವುತರು ಮತ್ತು ಕಾವಾಡಿಗಳು ಮುನ್ನಡೆಸುತ್ತಾರೆ. ಅವರಿಗೆ ಎಲ್ಲಾ ರೀತಿಯಲ್ಲಿ ಧನ ಸಹಾಯ, ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು.



Join Whatsapp