ಗೃಹಲಕ್ಷ್ಮೀ ಯೋಜನೆ ಆ.15ರಿಂದ ಜಾರಿ: ಮನೆಯ ಯಜಮಾನಿ ಖಾತೆಗೆ ನೇರ ₹2000

Prasthutha|

ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ಆ.15ರಿಂದ ಜಾರಿ ಬರಲಿದ್ದು, ಮನೆಯ ಯಜಮಾನಿ ಖಾತೆಗೆ ನೇರ 2000 ರೂ. ಜಮಾವಣೆಯಾಗಲಿದೆ.

- Advertisement -

ಆಗಸ್ಟ್‌ 15 ರಿಂದ ಗೃಹಲಕ್ಷ್ಮಿ ಯೋಜನೆ ಜಾರಿ
ಯೋಜನೆಗೆ ನೋಂದಾಯಿಸಲು 1 ತಿಂಗಳ ಕಾಲಾವಕಾಶ. ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದು.
APL, BPL ವ್ಯತ್ಯಾಸ ಇಲ್ಲದೆ, ಮನೆಯ ಯಜಮಾನಿಗೆ ಮಾಸಿಕ ₹2000
ಯೋಜನೆಯ ಲಾಭ ಪಡೆಯಲು ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ
ಎಲ್ಲಾ ರೀತಿಯ ಮಾಸಾಶನ (ಅಂಕವಿಕಲರು, ವಿಧವೆಯರು, ಹಿರಿಯ ನಾಗರಿಕರು) ಪಡೆಯುವ ಮನೆಯೊಡತಿಗೂ ಯೋಜನೆ ಅನ್ವಯ