ಬೆಂಗಳೂರು: ಕೈ ಚೀಲಕ್ಕೆ 20 ರೂ. ಶುಲ್ಕ ವಿಧಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಮಾಲ್ ಗೆ ಗ್ರಾಹಕ ನ್ಯಾಯಾಲಯ 3 ಸಾವಿರ ದಂಡ ವಿಧಿಸಿದೆ.
ಬೆಂಗಳೂರಿನ ಜೋಗುಪಾಳ್ಯ ನಿವಾಸಿಯಾಗಿರುವ ಸಂಗೀತಾ ಬೋಹ್ರಾ ಎಂಬ ಮಹಿಳೆ ಕಳೆದ ವರ್ಷ ಅಕ್ಟೋಬರ್ 6 ರಂದು ನಾಗಸಂದ್ರದಲ್ಲಿರುವ ಐಕಿಯಾ ಮಳಿಗೆಗೆ ಭೇಟಿ ನೀಡಿದ್ದರು. ಶಾಪಿಂಗ್ ಮುಗಿದ ನಂತರ ಬಿಲ್ ಮಾಡಿಸುವಾಗ ಅವರಿಗೆ ಕ್ಯಾರಿ ಬ್ಯಾಗ್ ಒಂದಕ್ಕೆ ಅವರು ಖರೀದಿಸಿದ ಸಾಮಾಗ್ರಿ ತುಂಬಿಸಿ ನೀಡಿದ ಸಿಬ್ಬಂದಿ ಕ್ಯಾರಿ ಬ್ಯಾಗಿಗೆ 20 ರೂಪಾಯಿ ಚಾರ್ಜ್ ಮಾಡಿದ್ದಾರೆ. ತಾನು ಖರೀದಿಸಿದ ವಸ್ತುಗಳನ್ನು ತುಂಬಿಸಿಕೊಂಡು ಹೋಗಲು ಕಂಪನಿ ಅದರ ಲೋಗೊ ಇರುವ ಕ್ಯಾರಿ ಬ್ಯಾಗ್ ನೀಡಿ ಅದಕ್ಕೆ ಇಪ್ಪತ್ತು ರೂಪಾಯಿ ವಸೂಲಿ ಮಾಡುವುದನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಆದರೆ, ಇದು ಕಂಪನಿ ರೂಲ್ಸ್ ಎಂದು ಸಿಬ್ಬಂದಿ ಶುಲ್ಕ ಪಡೆದಿದ್ದರು.
ನಂತರ ಮಹಿಳೆ ಮಾರ್ಚ್ ನಲ್ಲಿ ಶಾಂತಿನಗರದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಬಳಿಕ ಐಕಿಯಾ ಕಂಪನಿಯ ಭಾರತೀಯ ಘಟಕಕ್ಕೆ ಕಾನೂನು ನೋಟಿಸ್ ಕಳುಹಿಸಿದ್ದರು. ಈ ಸಂಬಂಧ ಅ. 4 ರಂದು ಗ್ರಾಹಕ ನ್ಯಾಯಾಲಯ ವಿಚಾರಣೆ ನಡೆಸಿ, ಕಂಪನಿಯ ಗ್ರಾಹಕ ಸೇವೆಯಲ್ಲಿನ ಲೋಪಗಳ ಬಗ್ಗೆ ಆಕ್ಷೇಪ ವ್ಯಕಪಡಿಸಿದೆ.