ನವದೆಹಲಿ: ‘ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ’ದ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಶೇಷ ಸರಣಿಯ ನಾಣ್ಯಗಳನ್ನು ಬಿಡುಗಡೆ ಮಾಡಿದರು. 1, 2, 5, 10 ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದೆ ಹಾಗೂ ಚಲಾವಣೆಗೂ ತರಲಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ದೃಷ್ಟಿಹೀನರೂ ಗುರುತಿಸಲು ಸಾಧ್ಯವಾಗುವಂತೆ ಈ ನಾಣ್ಯಗಳನ್ನು ವಿನ್ಯಾಸಗೊಳಿಸಲಾಗಿದ್ದು ವಿಶೇಷವಾಗಿದೆ.
12 ಸರ್ಕಾರಿ ಯೋಜನೆಗಳನ್ನು ಒಳಗೊಂಡ ‘ಜನ್ ಸಮರ್ಥ್ ಪೋರ್ಟಲ್’ಗೆ ಮೋದಿ ಅವರು ಇದೇ ವೇಳೆ ಚಾಲನೆ ನೀಡಿದರು.