ಮಂಗಳೂರು: ಕೆಲಸ ಕೊಡುವುದಾಗಿ ನಂಬಿಸಿ 150 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ಪಂಗನಾಮ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಮ್ ಪ್ರಸಾದ್ ಯಾನೆ ಹರೀಶ್ ಎಂದು ಗುರುತಿಸಲಾಗಿದೆ.
ರಾಮ್ ಪ್ರಸಾದ್ ತಾನು ಕೆ ಎಂಎಫ್ ನಿರ್ದೇಶಕ ಎಂದು ಹೇಳಿಕೊಂಡು ಅಮಾಯಕರಿಗೆ ಕೆಎಂಎಫ್ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡು ವಂಚಿಸಿದ್ದಾನೆ. ಜೊತೆಗೆ ಪ್ರತೀ ವ್ಯಕ್ತಿಯಿಂದ 50 ಸಾವಿರದಿಂದ ಹಿಡಿದು 3.50 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ. ನೂರಾರು ಅಮಾಯಕರು ಈತನ ಮೋಸಕ್ಕೆ ಬಲಿಯಾಗಿದ್ದನ್ನು ತಿಳಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ರಾಮ್ ಪ್ರಸಾದ್ ಬಳಿ ವಿಷಯ ಕೇಳಿದಾಗ ವಂಚನೆ ಮಾಡಿದ್ದನ್ನು ಬಾಯ್ಬಿಟ್ಟಿದ್ದಾನೆ. ಬಳಿಕ ರಾಮ್ ಪ್ರಸಾದ್ ಯಾನೆ ಹರೀಶ್ ನನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರ ನೇತೃತ್ವದಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.