ವಾಟ್ಸ್ ಆ್ಯಪ್’ನಲ್ಲಿ ಬಂದ ಲಿಂಕ್ ಒತ್ತಿ 12.70 ಲಕ್ಷ ರೂ. ಕಳೆದುಕೊಂಡ ಪ್ರಾಧ್ಯಾಪಕ!

Prasthutha|

ರಾಮನಗರ: ವಾಟ್ಸ್ ಆ್ಯಪ್’ನಲ್ಲಿ ಬಂದ ಹೂಡಿಕೆ ಲಿಂಕ್ ಕ್ಲಿಕ್ ಮಾಡಿದ ಮಾಗಡಿ ತಾಲ್ಲೂಕಿನ ಪ್ರಾಧ್ಯಾಪಕರೊಬ್ಬರು ಬ್ಲಾಕ್ ಟ್ರೇಡಿಂಗ್ ಹೂಡಿಕೆ ವಂಚಕರ ಜಾಲಕ್ಕೆ ಸಿಲುಕಿ ₹12.70 ಲಕ್ಷ ಕಳೆದುಕೊಂಡಿದ್ದಾರೆ.

- Advertisement -


ಎಚ್ ಡಿಎಫ್ ಸಿ ಬ್ಯಾಂಕ್ ಆನ್ ಲೈನ್ ಸರ್ವೀಸ್ ಲಿಂಕ್ ಹೆಸರಿನಲ್ಲಿ ಅಪರಿಚಿತ ವಾಟ್ಸ್ ಆ್ಯಪ್ ಸಂಖ್ಯೆಯಿಂದ ಬಂದಿದ್ದ ಸಂದೇಶವನ್ನು ಪ್ರಾಧ್ಯಾಪಕ ಕ್ಲಿಕ್ ಮಾಡಿದ್ದಾರೆ. ಆಗ ಬ್ಲಾಕ್ ಟ್ರೇಡಿಂಗ್ ನಲ್ಲಿ ಹೂಡಿಕೆ
ಮಾಡಿದರೆ ಶೇ 5–6 ಲಾಭ ಪಡೆಯಬಹುದು ಎಂಬ ಸಂದೇಶ ಕಾಣಿಸಿಕೊಂಡಿದೆ. ನಂತರ ಪ್ರಾಧ್ಯಾಪಕರು, ವಂಚಕರು ಕಳಿಸಿದ ಫಾರಂ ಭರ್ತಿ ಮಾಡಿ ತಮ್ಮ ಬ್ಯಾಂಕ್ ಖಾತೆ ವಿವರ ಹಂಚಿಕೊಂಡಿದ್ದಾರೆ.


ನಂತರ ವಂಚಕರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗೆ ಜುಲೈ 4ರಿಂದ ಆಗಸ್ಟ್ 6ರವರೆಗೆ ಒಟ್ಟು ₹12,69,101 ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.



Join Whatsapp