10 ರೂ ನೋಟುಗಳ ಸುರಿಮಳೆ: ಮುಗಿಬಿದ್ದ ಜನ

Prasthutha|

ಬೆಂಗಳೂರು: ನಗರದ ಕೆ.ಆರ್.ಮಾರ್ಕೆಟ್’ನಲ್ಲಿ 10 ರೂ. ಮುಖಬೆಲೆಯ ನೋಟುಗಳ ಸುರಿಮಳೆಯಾಗಿದೆ.

- Advertisement -


ಇವೆಂಟ್ ಮ್ಯಾನೇಜ್ಮೆಂಟ್ ಜೊತೆ ಆ್ಯಕರಿಂಗ್ ಕೂಡ ಮಾಡುತ್ತಿದ್ದ ಯುವಕನೋರ್ವ ಕೆ.ಆರ್.ಮಾರ್ಕೆಟ್ ಮೇಲು ಸೇತುವೆ( ಫ್ಲೈಓವರ್ )ಮೇಲಿಂದ ಹಣ ಎಸೆದಿದ್ದಾರೆ.
ಆ್ಯಕ್ಟಿವ್ ಹೋಂಡಾ ಸ್ಕೂಟರ್’ನಲ್ಲಿ ಬಂದ ಆತ ಹತ್ತು ರೂ ನೋಟು ಚೆಲ್ಲಿ ಹೋಗಿದ್ದು, ಆತ ಜೀವನದಲ್ಲಿ ಜಿಗುಪ್ಸೆಯಿಂದ ಫ್ಲೈಓವರ್ ಮೇಲಿಂದ ಹತ್ತು ರೂ ನೋಟು ಚೆಲ್ಲಿ ಹೋಗಿದ್ದಾನೆ ಎನ್ನಲಾಗಿದೆ.
ಮೇಲಿಂದ ಹಣ ಬೀಳುತ್ತಿದ್ದಂತೆ ಕೆಲವರು ಅದನ್ನು ಎತ್ತಿಕೊಳ್ಳಲು ಮುಗಿಬಿದಿದ್ದು, ಫ್ಲೈಓವರ್ ಮೇಲಿಂದ ಹಣದ ಮಳೆಯಾಗುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ತನಿಖೆಗಿಳಿದ ಪೊಲೀಸರು
ನೋಟು ಎಸೆದ ವ್ಯಕ್ತಿ ಯಾರೆನ್ನುವುದರ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಯಾವ ಉದ್ದೇಶಕ್ಕೆ ಹಣ ಎಸೆದ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹಣ ಚೆಲ್ಲಿದ ವ್ಯಕ್ತಿ ಬೆಂಗಳೂರಲ್ಲಿ ಇವೆಂಟ್ ಮ್ಯಾನೇಜ್’ಮೆಂಟ್ ನಡೆಸುತ್ತಿದ್ದ ಅರುಣ್ ಎಂಬುವುದು ಪತ್ತೆಯಾಗಿದೆ. ಅರುಣ್, ಇವೆಂಟ್ ಮ್ಯಾನೇಜ್ಮೆಂಟ್ ಜೊತೆ ಆ್ಯಕರಿಂಗ್ ಕೂಡ ಮಾಡುತ್ತಿದ್ದ. ನಾಗರಬಾವಿಯಲ್ಲಿದ್ದು ಯೂಟ್ಯೂಬ್ ಚಾನಲ್ ನಡೆಸುತ್ತಿದ್ದಾನೆ.

Join Whatsapp