SDPI ಮುಖಂಡ ಅನ್ವರ್ ಸಾದತ್ ಪುತ್ರನ ಬಗ್ಗೆ ಅವಹೇಳನಕಾರಿ ಸುದ್ದಿ: ‘ಜಯಕಿರಣ’ ಪತ್ರಿಕೆ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

Prasthutha|

ಮಂಗಳೂರು: ಉತ್ತರ ಪೊಲೀಸ್ ಠಾಣೆ ಪ್ರಕರಣವೊಂದರ ಕುರಿತಾಗಿ ಎಸ್.ಡಿ.ಪಿ.ಐ ಮುಖಂಡ ಅನ್ವರ್ ಸಾದತ್ ರವರ ಪುತ್ರ ಅಬ್ದುಲ್ಲಾ ಹನ್ನಾನ್ ರ ಭಾವಚಿತ್ರದೊಂದಿಗೆ “ಡ್ರಗ್ಸ್ ಗ್ಯಾಂಗಿನಿಂದ ಕೃತ್ಯ” ಎನ್ನುವ ತಲೆ ಬರಹದಡಿಯಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಸುದ್ದಿ ಪ್ರಕಟಿಸಿದ ಜಯಕಿರಣ ಪತ್ರಿಕೆಯ ಮಾಲಕರು ಮತ್ತು ಸಂಪಾದಕರ ವಿರುದ್ದ ಅನ್ವರ್ ಸಾದತ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

- Advertisement -

ಸುಮಾರು ಒಂದು ಕೋಟಿ‌ ರೂಪಾಯಿ ಮಾನಹಾನಿ ದಾವೆ ಯನ್ನು ಹೂಡಿದ್ದು, ಪ್ರತಿವಾದಿಗಳಿಗೆ ಮಂಗಳೂರಿನ ಹಿರಿಯ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಸಮನ್ಸ್ ಹೊರಡಿಸಿದೆ.

ಮಾತ್ರವಲ್ಲದೆ ಪ್ರತಿವಾದಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶಿಸಿದೆ.

- Advertisement -

ಅನ್ವರ್ ಸಾದತ್ ಪರ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರು ಇದರ ನ್ಯಾಯವಾದಿಗಳಾದ ಆಸಿಫ್ ಬೈಕಾಡಿ, ಇಸ್ಮಾಯಿಲ್ ಶಾಫಿ ಬೈಕಂಪಾಡಿ ,ಮುಫೀದ ಮುಡಿಪು ದಾವೆ ಹೂಡಿದ್ದಾರೆ.