ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ಉಪಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ 34,000 ಸೆಟ್ ಟಾಪ್ ಬಾಕ್ಸ್ ಹಂಚಿದ ಆರೋಪದಲ್ಲಿ ದೂರು ದಾಖಲಾಗಿದೆ.
ಕ್ಷೇತ್ರದ ಮತದಾರರಿಗೆ ಉಚಿತವಾಗಿ ಸೆಟ್ ಟಾಪ್ ಬಾಕ್ಸ್ ಹಂಚಿದ್ದಾರೆ ಎಂದು ಮುನಿರತ್ನ ವಿರುದ್ಧ ಹೋರಾಟಗಾರ ಸಾಕೇತ್ ಗೋಖಲೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಹಿರಿಯ ಪತ್ರಕರ್ತ ಡಿ.ಪಿ. ಸತೀಶ್, ತಮ್ಮ ಟ್ವೀಟ್ ನಲ್ಲಿ “ಆರ್ ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ 5 ಕೋಟಿ ರೂ. ಬೆಲೆ ಬಾಳುವ ಸುಮಾರು 34,000 ಸೆಟ್ ಟಾಪ್ ಬಾಕ್ಸ್ ಹಂಚಿದ್ದಾರೆ. ಒಂದು ವೇಳೆ ಅವರು ಗೆದ್ದರೂ ಚುನಾವಣಾ ವೆಚ್ಚ ಮಿತಿಯನ್ನು ಮೀರಿದ್ದಕ್ಕೆ ಅವರ ಸ್ಥಾನವನ್ನು ಅನರ್ಹಗೊಳಿಸಬಹುದೆಂದು ಕಾನೂನು ತಜ್ಞರು ಹೇಳುತ್ತಾರೆ’’ ಎಂದು ತಿಳಿಸಿದ್ದಾರೆ.
ಕ್ಷೇತ್ರದಲ್ಲಿ 50 ಸಾವಿರಕ್ಕೂ ಅಧಿಕ ಟಿವಿ ಸೆಟ್ ಟಾಪ್ ಬಾಕ್ಸ್ ಗಳನ್ನು ಹಂಚಲಾಗಿದೆ ಎಂದು ಕಾಂಗ್ರೆಸ್ ಕೂಡ ಆಪಾದಿಸಿತ್ತು. ನಾಳೆ ರಾಜ್ಯದಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದೆ.
ಚಿತ್ರ ಕೃಪೆ : ನಾನು ಗೌರಿ ಡಾಟ್ ಕಾಂ