ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 47 ರನ್‌ಗಳ ಭರ್ಜರಿ ಗೆಲುವು

Prasthutha|

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 47 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

- Advertisement -

ಈ ಗೆಲುವಿನ ಪರಿಣಾಮ ಆರ್‌ಸಿಬಿ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಹಾಗೂ ಡೆಲ್ಲಿ ಕ್ಯಾಪಿಟಲ್‌ 5 ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ ನೀಡಿದ 188 ರನ್‌ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಪವರ್‌ ಪ್ಲೇ ಓವರ್‌ನಲ್ಲೇ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಈಡಾಯಿತು.

- Advertisement -

ಡೇವಿಡ್‌ ವಾರ್ನರ್‌ (1 ರನ್‌), ಅಭಿಷೇಕ್ ಪೊರೆಲ್ (2 ರನ್‌), ಕುಮಾರ್ ಕುಶಾಗ್ರ (2 ರನ್‌) ರವರು ಆರ್‌ಸಿಬಿ ಬೌಲರ್ಸ್‌ ದಾಳಿಗೆ ತತ್ತರಿಸಿದರು. ಸ್ಫೋಟಕ ಆರಂಭಿಕ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ (21 ರನ್‌, 8 ಬೌಲ್‌, 2 ಬೌಂಡರಿ, 2 ಸಿಕ್ಸರ್‌) ಯಶ್‌ ದಯಾಲ್‌ ಬೌಲಿಂಗ್‌ನಲ್ಲಿ ರನ್‌ ಔಟ್‌ ಆಗುವ ಮೂಲಕ ಪೇವಿಲಿಯನ್‌ ತೆರಳಿದರು.

ಬಳಿಕ ಬಂದ ಶೆಯ್ ಹೋಪ್ (29 ರನ್‌, 23 ಬೌಲ್‌, 4 ಬೌಂಡರಿ) ಹಾಗೂ ನಾಯಕ ಅಕ್ಷರ್‌ ಪಟೇಲ್‌ (57 ರನ್‌, 39 ಬೌಲ್‌, 5 ಬೌಂಡರಿ, 3 ಸಿಕ್ಸರ್‌) ಕೊಂಚ ಪ್ರತಿರೋಧ ತೋರಿದರೂ ಪರಿಣಾಮ ಬೀರುವಲ್ಲಿ ವಿಫಲರಾದರು. ಅಂತಿಮವಾಗಿ ಮಾರಕ ಬ್ಯಾಟ್ಸ್‌ಮನ್‌ ಎಂದು ಖ್ಯಾತರಾಗಿದ್ದ ಟ್ರಿಸ್ಟಾನ್ ಸ್ಟಬ್ಸ್ ಕೂಡಾ ಕ್ಯಾಮ್ರನ್‌ ಗ್ರೀನ್‌ರ ಕರಾರುವಕ್‌ ಎಸೆತದ ಪರಿಣಾಮವಾಗಿ ರನ್‌ ಔಟ್‌ ಆದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ 140 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಶರಣಾಯಿತು.

ಆರ್‌ಸಿಬಿ ಪರ ಯಶ್ ದಯಾಳ್ 3 ವಿಕೆಟ್‌, ಲಾಕಿ ಫರ್ಗುಸನ್ ತಲಾ 2 ವಿಕೆಟ್‌, ಸ್ವಪ್ನಿಲ್‌ ಸಿಂಗ್‌, ಕ್ಯಾಮರೂನ್ ಗ್ರೀನ್, ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್‌ ಕಬಳಿಸಿದರು.



Join Whatsapp