ಮಂಗಳೂರು | ರೌಡಿಶೀಟರ್ ಇಂದ್ರಜೀತ್ ಬರ್ಬರ ಹತ್ಯೆ

Prasthutha|

ಮಂಗಳೂರು : ಬೊಕ್ಕಪಟ್ಟಣದ ಕರ್ನಲ್ ಗಾರ್ಡನ್ ಒಳಗಡೆ ರೌಡಿಶೀಟರ್ ಓರ್ವನನ್ನು ಬುಧವಾರ ರಾತ್ರಿ ಭೀಕರವಾಗಿ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.

ಹತ್ಯೆಗೀಡಾದ ಯುವಕನನ್ನು ಇಂದ್ರಜೀತ್ (29) ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್ ಆಗಿದ್ದ ಎಂದು ವರದಿಯೊಂದು ತಿಳಿಸಿದೆ.

- Advertisement -

ಬುಧವಾರ ರಾತ್ರಿ ನಡೆದಿದ್ದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಈತ ಭಾಗಿಯಾಗಿದ್ದ. ಈ ವೇಳೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಬಳಿಕ ಸುಮಾರು 2 ಗಂಟೆಗೆ ಕರ್ನಲ್ ಗಾರ್ಡನ್ ಬಳಿ ಈತನ ಹತ್ಯೆಗೈಯಲಾಗಿದೆ ಎನ್ನಲಾಗಿದೆ.

ಈ ಹಿಂದೆಯೂ ಈತನ ಮೇಲೆ ತಲವಾರು ದಾಳಿ ನಡೆದಿತ್ತು ಎಂದು ವರದಿಗಳು ತಿಳಿಸಿವೆ.

ಬರ್ಕೆ ಠಾಣಾ ವ್ಯಾಪ್ತಿಯ ಕುದ್ರೋಳಿ ಸಮೀಪದ ಕರ್ನಲ್ ಗಾರ್ಡನ್ ನಲ್ಲಿ ಹತ್ಯೆ ನಡೆದಿರುವುದರಿಂದ, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದ್ರಜೀತ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ.

ಹತ್ಯೆ ನಡೆದ ಸ್ಥಳಕ್ಕೆ ಬರ್ಕೆ ಠಾಣಾ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ್ ಮತ್ತು ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿ, ತನಿಖೆ ಕೈಗೆತ್ತಿಕೊಂಡಿದ್ದಾರೆ.

- Advertisement -