ಮುನ್ಸಿಪಾಲ್ ಕಾರ್ಪೋರೇಷನ್ ಗಳಲ್ಲಿ ಅಂತರ್ಜಾಲ ವಿಸ್ತರಣೆಗೆ RoW ನೀತಿ ಜಾರಿ: ಸಿಒಎಐ ಶ್ಲಾಘನೆ

Prasthutha|

ಬೆಂಗಳೂರು: ರಾಜ್ಯದ ಎಲ್ಲಾ ಮುನ್ಸಿಪಾಲ್ ಕಾರ್ಪೊರೇಷನ್ ಗಳಲ್ಲಿ ಟೆಲಿಕಾಂ ಟವರ್ ಹಾಗೂ ಅಂತರ್ಜಾಲವನ್ನು ವಿಸ್ತರಿಸುವ ಸಂಬಂಧ ರಾಜ್ಯ ಸರ್ಕಾರ RoW ನೀತಿಯ ಅಧಿಸೂಚನೆ ಹೊರಡಿಸಿದ್ದು, ಭಾರತೀಯ ದೂರ ಸಂಪರ್ಕ ಉದ್ಯಮದ ಪ್ರಾತಿನಿಧಿಕ ಸಂಸ್ಥೆಯಾದ ಸಿಒಎಐ ಅಭಿನಂದಿಸಿದೆ.

- Advertisement -

RoW ನೀತಿಯ ಪ್ರಕಾರ ಟೆಲಿಕಾಂ ಟವರ್ ಹಾಗೂ ಓಎಫ್ ಸಿ ಕೇಬಲ್‌ಗಳನ್ನು ಎಲ್ಲಾ ನಗರ ಪ್ರದೇಶ, ಮುನ್ಸಿಪಲ್ ಕೌನ್ಸಿಲ್‌ಗಳು, ಟೌನ್ ಮುನ್ಸಿಪಾಲ್ ಕೌನ್ಸಿಲ್‌ಗಳು, ಪಟ್ಟಣ ಪಂಚಾಯಂತ್ ಗಳಲ್ಲಿ ಎಳೆಯಲು ಅವಕಾಶ ಕಲ್ಪಿಸಿದೆ. ಈ ಮೂಲಕ ಡಿಜಿಟಲ್ ಇಂಡಿಯಾಗೆ ಅಂತರ್ಜಾಲದ ವ್ಯವಸ್ಥೆಯನ್ನು ಬಲಗೊಳಿಸಲು ರಾಜ್ಯ ಸರ್ಕಾರದ ನಡೆಯನ್ನು ಸಿಒಎಐನ ಮಹಾನಿರ್ದೇಶಕ ಡಾ.ಎಸ್.ಪಿ. ಕೊಚ್ಚರ್ ಶ್ಲಾಘಿಸಿದ್ದಾರೆ.

ಈ ಹಿಂದೆ ಆಪ್ಟಿಕಲ್ ಫೈಬರ್ ನಿಯೋಜನೆ, ಟವರ್ ನಿರ್ಮಾಣ, ಟವರ್ ಸೆಲ್ ನಿರ್ಮಾಣ ಸೇರಿದಂತೆ ಪ್ರತಿಯೊಂದಕ್ಕೂ ಪ್ರತ್ಯೇಕ ಶುಲ್ಕ ಪಾವತಿಸಬೇಕಿತ್ತು. ಆದರೀಗ ಈ ನಿಯಮವನ್ನು ಬದಲಿಸಿದ್ದು, ಟೆಲಿಕಾಂ ಟವರ್, ಓಎಫ್‌ಸಿ ಕೇಬಲ್ ಎಳೆಯುವ ಪ್ರತಿ ಅಪ್ಲಿಕೇಷನ್‌ಗೆ 10 ಸಾವಿರ ರೂ ನಿಗದಿ ಮಾಡಿದೆ.  ಈ ನೂತನ ನಿಯಮದ ಪ್ರಕಾರ ಒಂದೇ ಬಾರಿಗೆ ಶುಲ್ಕ ಪಾವತಿಸಲು ಅನುವು ಮಾಡಿಕೊಡಲಾಗಿದೆ.

- Advertisement -

ವರ್ಕ್ ಫ್ರಂ ಹೋಮ್‌ನಿಂದಾಗಿ ಬಹುತೇಕರು ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಆನ್ ಲೈನ್ ಕ್ಲಾಸ್ ನಿಂದಾಗಿ ಮಕ್ಕಳು ಮನೆಯಲ್ಲೇ ಅಂತರ್ಜಾಲಕ್ಕೆ ಮೊರೆ ಹೋಗಬೇಕಿದೆ. ಈ ಎಲ್ಲದ್ದಕ್ಕೂ ಹೆಚ್ಚು ಸ್ಪೀಡ್ ಇರುವ ಇಂಟರ್ ನೆಟ್ ಅವಶ್ಯಕ. ಇದೀಗ ಎಲ್ಲೆಡೆ ಅಂತರ್ಜಾಲ ಟವರ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವುದು ಜನರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ.

ಕರ್ನಾಟಕವು ಸುಮಾರು 69 ಮಿಲಿಯನ್ ಅಂತರ್ಜಾಲ ಚಂದಾದಾರರನ್ನು ಹೊಂದಿದ್ದು, ಸುಮಾರು 103% ಟೆಲಿ ಸಾಂದ್ರತೆಯನ್ನು ಹೊಂದಿದೆ.  44K ಟೆಲಿಕಾಂ ಟವರ್‌ಗಳು ಮತ್ತು ಅಂದಾಜು 1.5 ಲಕ್ಷ ಕಿಮೀ ಸಂಚಿತ ಆಪ್ಟಿಕಲ್ ಫೈಬರ್ ಕೇಬಲ್ ಹೊಂದಲಾಗಿದೆ. ಡಿಸೆಂಬರ್ 2024 ರ ವೇಳೆಗೆ 90K ಟೆಲಿಕಾಂ ಟವರ್‌ಗಳು ಮತ್ತು ನಾಲ್ಕು ಪಟ್ಟು ಹೆಚ್ಚು ಟೆಲಿಕಾಂ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ವಿಸ್ತರಿಸಲಾಗುವುದು.



Join Whatsapp