ಯೂಟ್ಯೂಬ್ ಚಾನೆಲ್ ಆರಂಭಿಸಿದ 12 ಗಂಟೆಗಳೊಳಗೆ 3 ಪ್ಲೇ ಬಟನ್ ಪಡೆದ ರೊನಾಲ್ಡೊ: ದಾಖಲೆ ಉಡೀಸ್

Prasthutha|

►ಒಂದೇ ದಿನದಲ್ಲಿ ರೊನಾಲ್ಡೊ ಯೂಟ್ಯೂಬ್’ನಿಂದ ಗಳಿಸಿದ ಆದಾಯ ಎಷ್ಟು..?

- Advertisement -


ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದ ಹೊರಗೂ ನೂತನ ದಾಖಲೆ ಬರೆದಿದ್ದಾರೆ.


ರೊನಾಲ್ಡೊ ‘ಯುಆರ್ ಕ್ರಿಸ್ಟಿಯಾನೋ’ ಎಂಬ ತಮ್ಮ ನೂತನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸುವ ಮೂಲಕ ಕಂಟೆಂಟ್ ಕ್ರಿಯೇಟರ್ ವೃತ್ತಿಜೀವನಕ್ಕೆ ಜಿಗಿಯಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ರೊನಾಲ್ಡೊ ಇದೀಗ ಯೂಟ್ಯೂಬ್ನಲ್ಲಿ ಮಿಸ್ಟರ್ ಬೀಸ್ಟ್ ಅವರ ದೊಡ್ಡ ದಾಖಲೆಯನ್ನು ಸಹ ಮುರಿದಿದ್ದಾರೆ. ಈ ಫುಟ್ಬಾಲ್ ಲೆಜೆಂಡ್ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ 30 ಮಿಲಿಯನ್ ಗೂ ಅಂದರೆ 3 ಕೋಟಿಗೂ ಅಧಿಕ ಸಂಖ್ಯೆಯ ಚಂದಾದಾರರನ್ನು ಪಡೆದುಕೊಂಡಿದ್ದಾರೆ.

- Advertisement -


ಯೂಟ್ಯೂಬ್ ನಲ್ಲಿ ವೇಗವಾಗಿ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ ದಾಖಲೆಯು ಈ ಹಿಂದೆ ಮಿಸ್ಟರ್ ಬೀಸ್ಟ್ ಹೆಸರಿನಲ್ಲಿತ್ತು. ಮಿಸ್ಟರ್ ಬೀಸ್ಟ್ ಎಂದೇ ಖ್ಯಾತರಾಗಿರುವ ಜಿಮ್ಮಿ ಡೊನಾಲ್ಡ್ ಸನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸಿದ ಎರಡೇ ವರ್ಷಗಳಲ್ಲಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಈ ವಿಚಾರದಲ್ಲಿ ರೊನಾಲ್ಡೊ, ಜಿಮ್ಮಿ ಡೊನಾಲ್ಡ್ ಸನ್ ಅವರನ್ನು ಹಿಂದಿಕ್ಕಿದ್ದಾರೆ.


12 ಗಂಟೆಗಳ ಒಳಗೆ ಡೈಮಂಡ್ ಪ್ಲೇ ಬಟನ್
ಇಷ್ಟೇ ಅಲ್ಲದೆ ರೊನಾಲ್ಡೊ, ಯೂಟ್ಯೂಬ್ ಚಾನೆಲ್ ಆರಂಭಿಸಿದ ಕೇವಲ 22 ನಿಮಿಷಗಳಲ್ಲಿ ಬೆಳ್ಳಿ, 90 ನಿಮಿಷಗಳಲ್ಲಿ ಗೋಲ್ಡನ್ ಮತ್ತು 12 ಗಂಟೆಗಳಲ್ಲಿ ಡೈಮಂಡ್ ಪ್ಲೇ ಬಟನ್ ಪಡೆದಿದ್ದಾರೆ. ವಾಸ್ತವವಾಗಿ ಒಬ್ಬ ಯೂಟ್ಯೂಬರ್ 1 ಲಕ್ಷ ಚಂದಾದಾರರನ್ನು ಪಡೆದರೆ ಸಿಲ್ವರ್ ಪ್ಲೇ ಬಟನ್, 1 ಮಿಲಿಯನ್ ಅಂದರೆ 10 ಲಕ್ಷ ಸಬ್ ಸ್ಕ್ರೈಬರ್ ಗಳನ್ನು ಪಡೆದರೆ ಗೋಲ್ಡ್ ಪ್ಲೇ ಬಟನ್ ಮತ್ತು 10 ಮಿಲಿಯನ್ ಅಂದರೆ 1 ಕೋಟಿ ಸಬ್ ಸ್ಕ್ರೈಬರ್ ಗಳನ್ನು ಪಡೆದರೆ ಡೈಮಂಡ್ ಪ್ಲೇ ಬಟನ್ ಅನ್ನು ಯೂಟ್ಯೂಬ್ ನಿಂದ ಪ್ರಶಸ್ತಿ ರೂಪದಲ್ಲಿ ನೀಡಲಾಗುತ್ತದೆ.


ಇದೀಗ ರೊನಾಲ್ಡೊ, ಕೇವಲ 12 ಗಂಟೆಗಳಲ್ಲಿ ಯೂಟ್ಯೂಬ್ ನೀಡುವ ಈ ಮೂರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಯೂಟ್ಯೂಬ್ ನಿಂದ ಈ ಪ್ರಶಸ್ತಿ ಸಿಕ್ಕಿದನ್ನು ರೊನಾಲ್ಡೊ ತಮ್ಮ ಪುತ್ರಿಯರೊಂದಿಗೆ ಹಂಚಿಕೊಂಡಿದ್ದು, ಇದರ ವಿಡಿಯೋವನ್ನು ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


ರೊನಾಲ್ಡೊ ಒಂದು ದಿನದ ಆದಾಯ ಎಷ್ಟು?
ವರದಿಗಳ ಪ್ರಕಾರ, ರೊನಾಲ್ಡೊ ಇದುವರೆಗೆ ತಮ್ಮ ಚಾನೆಲ್ ನಲ್ಲಿ 19 ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ವೀಡಿಯೊಗಳು ಸುಮಾರು 40 ಮಿಲಿಯನ್ ವೀಕ್ಷಣೆಗಳನ್ನು ಪಡೆದಿವೆ. ಯೂಟ್ಯೂಬ್ ಪ್ರಕಾರ, ಒಬ್ಬ ಯೂಟ್ಯೂಬರ್ 1 ಮಿಲಿಯನ್ ವೀಕ್ಷಣೆಗಳಲ್ಲಿ 1200 ಡಾಲರ್ ಗಳಿಸಬಹುದು. ಹೀಗಾಗಿ, ರೊನಾಲ್ಡೊ ಇಲ್ಲಿಯವರೆಗೆ ಸುಮಾರು 2,40,000 ಡಾಲರ್ ಗಳಿಸಿದ್ದಾರೆ ಮತ್ತು ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ವರದಿಗಳು ಹೇಳಿವೆ.



Join Whatsapp