ಫುಟ್ ಬಾಲ್: 900 ಗೋಲು ದಾಖಲಿಸಿ ಹೊಸ ಇತಿಹಾಸ ಬರೆದ ರೊನಾಲ್ಡೊ

Prasthutha|

ಅತಿಹೆಚ್ಚು ಗೋಲುಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ

- Advertisement -


ನವದೆಹಲಿ: ದಿಗ್ಗಜ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.


ಅವರು ತಮ್ಮ ವೃತ್ತಿಜೀವನದಲ್ಲಿ 900 ಗೋಲು ದಾಖಲಿಸುವ ಮೂಲಕ ಫುಟ್ ಬಾಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

- Advertisement -


ಗುರುವಾರ ಲಿಸ್ಬನ್ ನಲ್ಲಿ ನಡೆದ ಯುಇಎಫ್ ಎ ನೇಷನ್ಸ್ ಲೀಗ್ ಗುಂಪು ಹಂತದ ಪಂದ್ಯದಲ್ಲಿ ಕ್ರೊವೇಷಿಯಾದ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಈ ವಿಕ್ರಮ ಸಾಧಿಸಿದರು.


ಈ ಪಂದ್ಯದಲ್ಲಿ ಪೋರ್ಚುಗಲ್ 2-1 ಗೋಲುಗಳ ಅಂತರದಿಂದ ಕ್ರೊವೇಷಿಯಾವನ್ನು ಸೋಲಿಸಿತು. ಹಾಗೂ ರೊನಾಲ್ಡೊ ಅವರ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಯಿತು.


ಈ ಐತಿಹಾಸಿಕ ಸಾಧನೆಯೊಂದಿಗೆ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲಿ 900 ಗೋಲುಗಳನ್ನು ಹೊಡೆದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

https://x.com/Cristiano/status/1831822844378104206?ref_src=twsrc%5Etfw%7Ctwcamp%5Etweetembed%7Ctwterm%5E1831822844378104206%7Ctwgr%5E9be8d8d3c12a033047fae07901ea3d5941ff569c%7Ctwcon%5Es1_c10&ref_url=https%3A%2F%2Fwww.prajavani.net%2Fsports%2Ffootball%2Fcristiano-ronaldo-becomes-first-footballer-to-score-900-career-goals-2956905


ಅತಿಹೆಚ್ಚು ಗೋಲುಗಳಿಸಿದ ಆಟಗಾರರು

  • ಕ್ರಿಸ್ಟಿಯಾನೊ ರೊನಾಲ್ಡೊ- 900 (ಪೋರ್ಚುಗಲ್)
  • ಲಿಯೋನೆಲ್ ಮೆಸ್ಸಿ – 842 (ಅರ್ಜೆಂಟೀನಾ)
  • ರುಬೆಲ್ ಡಿಯಾಸ್– 769 (ಪೋರ್ಚುಗಲ್)
  • ಪೀಲೆ- 765 (ಬ್ರೆಜಿಲ್)


Join Whatsapp