ಚಲಿಸುತ್ತಿರುವ ಬೈಕ್‌’ನಲ್ಲಿ ರೋಮ್ಯಾನ್ಸ್: ದಂಪತಿ ವಿರುದ್ಧ ಪ್ರಕರಣ ದಾಖಲು

Prasthutha|

ಅಜ್ಮೀರ್‌: ರಾಜಸ್ಥಾನದ ಅಜ್ಮೀರ್‌’ನಲ್ಲಿ ಚಲಿಸುತ್ತಿರುವ ಬೈಕ್‌ನಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ವೀಡಿಯೊಗಳು ವೈರಲ್ ಆಗಿದ್ದು, ಪೊಲೀಸರು ವಿಷಯ ತಿಳಿದು ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.

- Advertisement -

ಫೆಬ್ರವರಿ 6 ರಂದು ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಚಲಿಸುತ್ತಿರುವ ಬೈಕ್‌ನಲ್ಲಿ ದಂಪತಿಗಳು ಪ್ರಣಯ ಮಾಡುತ್ತಿದ್ದರು. ಅವರು ರಿಜನಲ್ ಕಾಲೇಜು ಕ್ರಾಸ್‌’ರೋಡ್‌’ನಿಂದ ನೌಸರ್ ಕಣಿವೆಗೆ ಪ್ರಯಾಣಿಸುತ್ತಿದ್ದರು.

ಠಾಣಾಧಿಕಾರಿ ಕರಣ್ ಸಿಂಗ್ ಖಂಗರೋಟ್ ಅವರು, “ಚಲಿಸುತ್ತಿರುವ ಬೈಕ್‌ನಲ್ಲಿ ದಂಪತಿಗಳ ಸಾಹಸದ ವೀಡಿಯೊವನ್ನು ಪೊಲೀಸರು ಗಮನಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸವಾರ ಸಾಹಿಲ್‌ಗಾಗಿ ಶೋಧ ನಡೆಸಲಾಯಿತು. ಸಾಹಿಲ್ ಅಜ್ಮೀರ್‌ನ ಫೇ ಸಾಗರ್ ರಸ್ತೆಯ ನಿವಾಸಿ. ತನ್ನೊಂದಿಗೆ ಬೈಕ್ ನಲ್ಲಿದ್ದ ಮಹಿಳೆ ಯಾರೆಂದು ತಿಳಿಸಿದ್ದಾನೆ” ಎಂದು ಹೇಳಿದರು. ವರದಿಗಳ ಪ್ರಕಾರ, ಕ್ರಿಶ್ಚಿಯನ್ ಗಂಜ್ ಠಾಣೆ ಪೊಲೀಸರು ದಂಪತಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 336- (ಜೀವಕ್ಕೆ ಅಪಾಯ), 279- (ನಿರ್ಲಕ್ಷ್ಯದ ಕೃತ್ಯ) ಮತ್ತು 294- (ಸಾರ್ವಜನಿಕ ಸ್ಥಳದಲ್ಲಿ) ಅಶ್ಲೀಲ ಕೃತ್ಯ ಎಸಗುವ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.