ಒಂದೇ ಪಂದ್ಯದಲ್ಲಿ 3 ದಾಖಲೆ ಬರೆದ ರೋಹಿತ್​ ಶರ್ಮಾ!

Prasthutha|

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಅಫ್ಗಾನಿಸ್ತಾನ ಹಾಗೂ ಭಾರತ ನಡುವಿನ ಟಿ20 ಪಂದ್ಯದಲ್ಲಿ ಭಾರತ ತಂಡದ ರೋಹಿತ್​ ಶರ್ಮಾ ಮೂರು ದಾಖಲೆ ಬರೆದಿದ್ದಾರೆ.

- Advertisement -

ಅಫ್ಗನ್ ತಂಡವು ಭಾರತದ ಎದುರು ಆಡಿದ ಚೊಚ್ಚಲ ಟಿ20 ಸರಣಿಯಲ್ಲಿ ಆತಿಥೇಯ ಬಳಗವು 3-0ಯಿಂದ ಕ್ಲೀನ್‌ಸ್ವೀಪ್ ಜಯಸಾಧಿಸಿದೆ. ಜೊತೆಗೆ ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ ಶತಕ ಸಿಡಿಸಿದ್ದಾರೆ. ಇದೇ ಪಂದ್ಯ ರೋಹಿತ್ ಶರ್ಮಾ 3 ಹೊಸ ದಾಖಲೆಗೆ ಸಾಕ್ಷಿಯಾಗಿದೆ.

ವಿರಾಟ್‌ ಕೊಹ್ಲಿ ದಾಖಲೆಯನ್ನು ತನ್ನ ಹೆಸರಿಗೆ ಬರೆದ ರೋಹಿತ್‌

- Advertisement -

ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ನಾಯಕನಾಗಿ 1570 ರನ್‌ ಕಲೆಹಾಕಿದ್ದಾರೆ. ರೋಹಿತ್‌ ಶರ್ಮಾ ಈ ದಾಖಲೆಯನ್ನು ಮುರಿದು ಭಾರತದ ಪರ ನಾಯಕನಾಗಿ ಅತ್ಯಧಿಕ ರನ್​ಗಳಿಸಿದ ಆಟಗಾರ ಎಂಬ ಶ್ರೇಯ ಪಡೆದಿದ್ದಾರೆ.

ರೋಹಿತ್​ 44ರನ್​ ಗಳಿಸುತ್ತಿದ್ದಂತೆ ವಿರಾಟ್​ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ರೋಹಿತ್‌ ನಾಯಕನಾಗಿ ಒಟ್ಟು 1647 ರನ್‌ ಕಲೆಹಾಕಿದ್ದಾರೆ.

ಜೊತೆಯಾಟದ ದಾಖಲೆ

ಯುವ ಆಟಗಾರ ರಿಂಕು ಸಿಂಗ್‌ ಮತ್ತು ರೋಹಿತ್ 5ನೇ ವಿಕೆಟ್​ಗೆ ಅಜೇಯ 190 ರನ್​ ಜೊತೆಯಾಟ ನಡೆಸಿರುವುದು ದಾಖಲೆಯಾಗಿದೆ. ಭಾರತ ಪರ ಅತ್ಯಧಿಕ ಜತೆಯಾಟ ನಡೆಸಿದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಂಜು ಸ್ಯಾಮ್ಸನ್​ ಮತ್ತು ದೀಪಕ್​ ಹೂಡಾ ಅವರ ಹೆಸರಿನಲ್ಲಿ ಇತ್ತು. 2022ರಲ್ಲಿ ಐರ್ಲೆಂಡ್‌​ ವಿರುದ್ಧದ ಪಂದ್ಯದಲ್ಲಿ ಸಂಜು ಮತ್ತು ಹೂಡಾ 176 ರನ್​ಗಳ ಜೊತೆಯಾಟ ನಡೆಸಿದ್ದರು.ರಿಂಕು ಸಿಂಗ್‌ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಾರೆ. 38 ಎಸೆತ ಎದುರಿಸಿ ಅಜೇಯ 63 ರನ್​ ಗಳಿಸಿದರು. ಇದರಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ಇದ್ದವು.

ಶತಕದ ಜೊತೆಯಾಟ

ರೋಹಿತ್​ ಶರ್ಮಾ 69 ಎಸೆತಗಳಿಂದ ಅಜೇಯ 121 ರನ್​ ಬಾರಿಸಿ ಶತಕ ಹೊಡೆದಿದ್ದು, ಇದರಲ್ಲಿ 8 ಸಿಕ್ಸರ್​ ಮತ್ತು 11 ಬೌಂಡರಿಗಳಿದ್ದವು. ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ರೋಹಿತ್‌ ಅವರು 5 ಶತಕಗಳನ್ನು ಬಾರಿಸಿದ್ದಾರೆ. 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್​ ಎರಡನೇ ಸ್ಥಾನದಲ್ಲಿ, ಮೂರು ಶತಕ ಬಾರಿಸಿರುವ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್ 3ನೇ ಸ್ಥಾನದಲ್ಲಿದ್ದಾರೆ.

Join Whatsapp