ರೋಹಿಂಗ್ಯಾ ಮುಸ್ಲಿಮರ ಅಂತಾರಾಷ್ಟ್ರೀಯ ಪ್ರತಿನಿಧಿಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

Prasthutha|

ಢಾಕಾ: ದಕ್ಷಿಣ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿ ರೋಹಿಂಗ್ಯಾ ಮುಸ್ಲಿಮರ ಅಂತಾರಾಷ್ಟ್ರೀಯ ಪ್ರತಿನಿಧಿಯನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿದೆ.

- Advertisement -

ಮೃತ ಮುಹಿಬುಲ್ಲಾ ಮೂಲತಃ ಶಿಕ್ಷಕ ಮತ್ತು ವಕೀಲರಾಗಿದ್ದು, ರೋಹಿಂಗ್ಯಾ ಸಮುದಾಯದ ಕಲ್ಯಾಣಕ್ಕಾಗಿ ಹೋರಾಟ ನಡೆಸುತ್ತಿದ್ದರು.

ಕಾಕ್ಸ್ ಬಝಾರ್ ಜಿಲ್ಲೆಯ ಉಖಿಯಾದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಮುಹಿಬುಲ್ಲಾ ಅವರನ್ನು ಗುರಿಯಾಗಿಸಿ ನಡೆಸಿದ ಗುಂಡಿನ ದಾಳಿಗೆ ಅವರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಸಶಸ್ತ್ರ ಪೊಲೀಸ್ ಬೆಟಾಲಿಯನ್ ನ ಕಮಾಂಡರ್ ನೈಮುಲ್ ಹಕ್ ಮಾಹಿತಿ ನೀಡಿದ್ದಾರೆ.

- Advertisement -

ಈ ಹಿಂದೆ ಮುಹಿಬುಲ್ಲಾ ಅವರು 2019 ರಲ್ಲಿ ಶ್ವೇತಭವನಕ್ಕೆ ಭೇಟಿ ನೀಡಿ ಅಮೆರಿಕ ನಿಕಟಪೂರ್ವ ಅಧ್ಯಕ್ಷ ಟ್ರಂಪ್ ಜೊತೆ ಧಾರ್ಮಿಕ ಅಲ್ಪಸಂಖ್ಯಾತರಾದ ರೋಹಿಂಗ್ಯಾಗಳು ಎದುರಿಸುತ್ತಿರುವ ಯಾತನೆ ಮತ್ತು ದೌರ್ಜನ್ಯದ ಬಗ್ಗೆ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಮಾಧ್ಯಮಗಳ ವ್ಯಾಪಕ ವಿಮರ್ಶನೆಗೊಳಗಾಗಿದ್ದರು.

ರೋಹಿಂಗ್ಯಾ ಪರ ಹೋರಾಟಗಾರರಾಗಿದ್ದ ಮುಹಿಬುಲ್ಲಾ ಅವರು ರೋಹಿಂಗ್ಯಾ ಸೊಸೈಟಿ ಫಾರ್ ಪೀಸ್ ಆಂಡ್ ಹ್ಯೂಮನ್ ರೈಟ್ಸ್ ಎಂಬ ಮಾನವಹಕ್ಕು ಸಂಸ್ಥೆಯನ್ನು ಸ್ಥಾಪಿಸಿ ರೋಹಿಂಗ್ಯಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸಿದ್ದರು.



Join Whatsapp