ರೋಹಿಂಗ್ಯಾ ವಲಸಿಗರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆ: ಸರ್ಕಾರದಿಂದ ನಿರಾಶ್ರಿತರ ವಿರುದ್ಧ ಕಪೋಲಕಲ್ಪಿತ ಆರೋಪ

Prasthutha|

ನವದೆಹಲಿ: ಭಾರತದಲ್ಲಿ ರೋಹಿಂಗ್ಯಾ ನಿರಾಶ್ರಿತರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಂದು ಸರ್ಕಾರ ಕಪೋಲಕಲ್ಪಿತ ಆರೋಪವನ್ನು ಮಾಡಿದೆ. ರೋಹಿಂಗ್ಯಾಗಳ ಹಿನ್ನೆಲೆ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವುದರ ಜೊತೆಗೆ ಅವರ ಬಳಿಯಿರುವ ನಕಲಿ ಭಾರತೀಯ ದಾಖಲೆಗಳನ್ನು ತಕ್ಷಣದಿಂದ ರದ್ದುಗೊಳಿಸಿ ಅವರನ್ನು ಭಾರತದಿಂದ ಇಲ್ಲಿನ ಕಾನೂನಿನ್ವಯ ಗಡಿಪಾರುಗೊಳಿಸುವಂತೆ ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆಯೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

- Advertisement -

ರೋಹಿಂಗ್ಯಾ ನಿರಾಶ್ರಿತರ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಗೃಹ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಅವರು ಪ್ರಯಾಣದ ದಾಖಲೆಗಳಿಲ್ಲದೆ ದೇಶಕ್ಕೆ ಪ್ರವೇಶಿಸುವ ವಿದೇಶಿ ಪ್ರಜೆಗಳನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಲಪಂಥೀಯ ಸರ್ಕಾರವು ರೋಹಿಂಗ್ಯಾ ನಿರಾಶ್ರಿತರನ್ನು ನಿರಂತರವಾಗಿ ಗುರಿಯಾಗಿಸುತ್ತಿರುವುದರಿಂದ ಅವರ ಮೇಲೆ ಹಿಂಸೆ ಮತ್ತು ಕಿರುಕುಳದಂತಹಾ ದಾಳಿ ನಡೆಯುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಇತ್ತೀಚೆಗೆ ನವದೆಹಲಿಯ ಶ್ರಮಾ ವಿಹಾರದಲ್ಲಿರುವ ರೋಹಿಂಗ್ಯಾ ಶಿಬಿರಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ಮತ್ತು ಬಲಪಂಥೀಯರ ವಿರುದ್ಧ ಪತ್ರಕರ್ತ ರವಿ ನಾಯರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

- Advertisement -

ಮಾತ್ರವಲ್ಲದೆ ರೋಹಿಂಗ್ಯನ್ನರು ಭಾರತಕ್ಕೆ ಭದ್ರತಾ ಬೆದರಿಕೆಯಾಗಿ ಪರಿಗಣಿಸಲಿದೆಯೆಂಬ ಸರ್ಕಾರದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಇದನ್ನು ಸಾಬೀತುಪಡಿಸುವ ದಾಖಲೆಗಳನ್ನು ಬಹಿರಂಗಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Join Whatsapp